ಬಾಲ ಕಾಯ್ದೆ ತಿದ್ದುಪಡಿ: ಸರ್ಕಾರಕ್ಕೆ ಹಿನ್ನಡೆ

ಅತ್ಯಾಚಾರದಂಥ ಗಂಭೀರ ಅಪರಾಧಗಳಲ್ಲಿ ಭಾಗಿಯಾದ 16ರಿಂದ 18 ವರ್ಷದ ನಡುವಿನ ಇತರೆ ಬಾಲಾಪರಾಧಿಗಳಿಗಿಂತ ಭಿನ್ನವಾಗಿ ನೋಡಬೇಕೆನ್ನುವ ಸರ್ಕಾರದ ವಾದವನ್ನು ಸಂಸದೀಯ ಸ್ಥಾಯಿ ಸಮಿತಿ ತಿರಸ್ಕರಿಸಿದೆ...
ಸಂಸದೀಯ ಸ್ಥಾಯಿ ಸಮಿತಿ
ಸಂಸದೀಯ ಸ್ಥಾಯಿ ಸಮಿತಿ

ನವದೆಹಲಿ: ಅತ್ಯಾಚಾರದಂಥ ಗಂಭೀರ ಅಪರಾಧಗಳಲ್ಲಿ ಭಾಗಿಯಾದ 16ರಿಂದ 18 ವರ್ಷದ ನಡುವಿನ ಇತರೆ ಬಾಲಾಪರಾಧಿಗಳಿಗಿಂತ ಭಿನ್ನವಾಗಿ ನೋಡಬೇಕೆನ್ನುವ ಸರ್ಕಾರದ ವಾದವನ್ನು ಸಂಸದೀಯ ಸ್ಥಾಯಿ ಸಮಿತಿ ತಿರಸ್ಕರಿಸಿದೆ.

ಈ ರೀತಿಯ ಪ್ರಯತ್ನ ಕಾನೂನು ಜತೆಗೆ ಸಂಘರ್ಷಕ್ಕೆ ಅವಕಾಶ ಮಾಡಿಕೊಡುತ್ತದೆ. ಹಾಗಾಗಿ ಈ ಪ್ರಸ್ತಾಪವನ್ನು ಮರುಪರಿಶೀಲಿಸುವ ಅಗತ್ಯ ಇದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ. ಬಾಲಪರಾಧ ನ್ಯಾಯ ವಿಧೇಯಕ 2014 ಅನ್ನು ಅಧ್ಯಯನ ನಡೆಸಿದ ಬಳಿಕ ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ಸಮಿತಿಯು ಈ ನಿರ್ಧಾರಕ್ಕೆ ಬಂದಿದೆ.

16ರಿಂದ 18 ವರ್ಷದೊಳಗಿನ ಮಕ್ಕಳನ್ನೂ 16ಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ರೀತಿಯಲ್ಲೇ ನೋಡಬೇಕು. ದೆಹಲಿ ಗ್ಯಾಂಗ್ ರೇಪ್ ಬಳಿಕ ಬಾಲಪರಾಧ ನ್ಯಾಯ ವಿಧೇ ಯಕವನ್ನು ಸಂಸತ್ತಿನಲ್ಲಿ ಮಂಡಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com