
ಬೆಂಗಳೂರು: ಬೇನಾಮಿ ಕಾಯಿದೆ ಅನ್ವಯ ಎಫ್ ಐಆರ್ ದಾಖಲಿಸಿದ್ದೀರಿ, ಆದರೆ ದೋ ಷಾರೋಪ ಪಟ್ಟಿಯಲ್ಲಿ ಅದಕ್ಕೆ ಉತ್ತರ ನೀಡಿಲ್ಲ. ಅಪರಾಧಿ ಸ್ಥಾನದಲ್ಲಿರುವ ಜಯಲಲಿತಾ ಅವರಿಂದ ಉಳಿದ ಮೂವರ ಖಾತೆಗೆ ಹಣ ಸಂದಾಯವಾಗಿದೆ ಎಂದಿದ್ದೀರಿ. ಆದರೆ ಅದರ ದಾಖಲೆ ಕೇಳಿದರೆ ಇಲ್ಲ ಎನ್ನುತ್ತೀರಿ. ಈ ರೀತಿ ವಾದ ಮಂಡಿಸಿದರೆ ಹೇಗೆ? ನಿಮ್ಮ ವಾದದಲ್ಲಿ ಅಸ್ಪಷ್ಟ ಗೋಚರಿಸುತ್ತಿರುವುದಾಗಿ ಜಯಲಲಿತಾ ವಿರುದ್ದದ ಪ್ರಕರಣದಲ್ಲಿ ಪ್ರಾಸಿಕ್ಯೋಷನ್
ಪರ ವಾದ ಮಂಡಿಸುತ್ತಿರುವ ಭವಾನಿ ಸಿಂಗ್ ಅವರ ವಾದಕ್ಕೆ ಹೈಕೋರ್ಟ್ ಚಾಟಿ ಬೀಸಿತು. ಜಯಲಲಿತಾ ಸೇರಿ ನಾಲ್ವರು ಸಲ್ಲಿಸಿರುವ ಮೇಲ್ಮನವಿ ಅರ್ಜಿ ವಿಚಾರಣೆ
ನಡೆಸಿದ ವಿಶೇಷ ನ್ಯಾಯಪೀಠದ ನ್ಯಾ.ಸಿ.ಆರ್.ಕುಮಾರಸ್ವಾಮಿ ಅವರಿದ್ದ ಪೀಠ, 1974ರಲ್ಲಿ ಫೋ ಸ್ ಗಾರ್ಡನ್ ಖರೀದಿಸಲಾಗಿದೆ ಎಂದಿದೆ. ಲೆಕ್ಕದಲ್ಲಿ ಅದನ್ನು ಹೇಗೆ ದಾಖಲಿಸಿದ್ದೀರಿ? ಜಯಲಲಿತಾರಿಂದ ಉಳಿದ ಮೂವರ ಖಾತೆಗೆ ಹಣ ವರ್ಗಾವಣೆ ಮಾಡಿದೆ ಎಂದು ಹೇಳಿದ್ದೀರಿ ಈ ಕುರಿತು ನಿಮ್ಮ ಬಳಿ ಇರುವ ದಾಖಲೆಗಳೇನು ಎಂದು ನ್ಯಾಯಪೀಠ ಪ್ರಶ್ನೆಗಳ ಸುರಿಮಳೆಯನ್ನು ಒಂದೆಡೆ ಹರಿಸುತ್ತಿದ್ದರೆ, ಮತ್ತೊಂದೆಡೆ ಭವಾನಿ ಸಿಂಗ್ ಇದಕ್ಕೆ ತಬ್ಬಿಬ್ಬಾಗಿ ವಾದ ಮಂಡಿಸಲು ಕಾಲಾವಕಾಶ ನೀಡಬೇಕೆಂದು ಕೋರಿದರು. ಇದನ್ನು ನಿರಾಕರಿಸಿದ ಪೀಠ ವಿಚಾರಣೆಯನ್ನು ಗುರುವಾಕ್ಕೆ ಮುಂದೂಡಿತು.
ಪ್ರಕರಣದ ಅರಿವಿಲ್ಲವೇ?
ಅಕ್ರಮ ಆಸ್ತಿಗಳಿಕೆಗೆ ಸಂಬಂಧಿಸಿದಂತೆ ನಿಮ್ಮ ಬಳಿ ಇರುವ ದಾಖಲೆ ಮತ್ತು ಆಧಾರಗಳೇನು ಎಂದು ಪೀಠ ಪ್ರಶ್ನಿಸುತ್ತಿದ್ದರೆ, ಅದಕ್ಕೆ ತಮ್ಮ ಬಳಿ ಇರುವ ದಾಖಲೆಗಳನ್ನು ಕೆದಕಲು ಆರಂಭಿಸಿದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಪೀಠ, ಏನ್ರೀ ಯಾವ ದಾಖಲೆ ಎಲ್ಲಿದೆ ಎಂದು ನಿಮಗೆ ತಿಳಿದಿಲ್ಲವೇ? ಅಲ್ಲದೇ ವಾದ ಮಂಡಿಸಲು ಕಾಲಾವಕಾಶ ಕೇಳುತ್ತಿ ದ್ದೀರಿ. ಹಾಗಿದ್ದರೆ ಇಷ್ಟು ವರ್ಷ ಏನು ಮಾಡುತ್ತಿದ್ದೀರಿ? ನಿಮಗೆ ಪ್ರಕರಣದ ಅರಿವಿಲ್ಲವೇ? ಚಿಕ್ಕ ಮಕ್ಕಳ ರೀತಿ ವರ್ತಿಸುತ್ತೀದ್ದೀರಲ್ಲಾ ಎಂದು ಪೀಠ ಭವಾನಿ ಸಿಂಗ್ ಅವರನ್ನು ಪ್ರಶ್ನಿಸಿತು
Advertisement