ಸ್ವಚ್ಛ ಭಾರತ: ರಾಜ್ಯಕ್ಕೆ 80 ಕೋಟಿ

ಸ್ವಚ್ಛ ಭಾರತ ಅಭಿಯಾನದಡಿ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಮೊದಲ ಕಂತಿನಲ್ಲಿ ರು. 80.1 ಕೋಟಿ ಬಿಡುಗಡೆ ಮಾಡಿದೆ. ನಗರಾಭಿವೃದ್ಧಿ ಇಲಾಖೆಯು...
ಸ್ವಚ್ಛ ಭಾರತ ಅಭಿಯಾನ
ಸ್ವಚ್ಛ ಭಾರತ ಅಭಿಯಾನ

ನವದೆಹಲಿ: ಸ್ವಚ್ಛ ಭಾರತ ಅಭಿಯಾನದಡಿ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಮೊದಲ ಕಂತಿನಲ್ಲಿ ರು. 80.1 ಕೋಟಿ ಬಿಡುಗಡೆ ಮಾಡಿದೆ. ನಗರಾಭಿವೃದ್ಧಿ ಇಲಾಖೆಯು
ಮೊದಲ ಕಂತಿನಲ್ಲಿ ಹತ್ತು ರಾಜ್ಯಗಳಿಗೆ ಒಟ್ಟು ರು.  450 ಕೋಟಿ ಬಿಡುಗಡೆ ಮಾಡಿದೆ. ಅತಿ ಹೆಚ್ಚು ಅಂದರೆ,ಮಹಾರಾಷ್ಟ್ರಕ್ಕೆ ರು.  135 ಕೋಟಿ ರುಪಾಯಿ ಬಿಡುಗಡೆ ಮಾಡಿದೆ. ಅತಿ ಕಡಿಮೆ ಎಂದರೆ ಒಡಿಶಾಗೆ ರು.  1.43 ಕೋಟಿ ಬಿಡುಗಡೆ ಮಾಡಿದೆ. 2018ರೊಳಗೆ
ನಗರಾಭಿವೃದ್ಧಿ  ಇಲಾಖೆಯು 1.04 ಕೋಟಿ ಶೌಚಾಲಯ ನಿರ್ಮಿಸುವ ಗುರಿ ಹೊಂದಲಾಗಿದ್ದು, ಕರ್ನಾಟಕದಲ್ಲಿ 8.88 ಲಕ್ಷ ಶೌಚಾಲಯ ನಿರ್ಮಿಸುವ ಗುರಿ ನಿಗದಿ ಮಾಡಿದೆ ಎಂದು ನಗರಾಭಿವೃದ್ಧಿ  ಖಾತೆರಾಜ್ಯಸಚಿವ ಬಾಬುಲ್ ಸುಪ್ರಿಯೋ ಲೋಕಸಭೆಯಲ್ಲಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com