ಝಕಿ ಉರ್ ರೆಹಮಾನ್ ಲಖ್ವಿ
ಝಕಿ ಉರ್ ರೆಹಮಾನ್ ಲಖ್ವಿ

ಪಾಕ್ ಜೈಲೊಳಗೆ ಉಗ್ರ ಲಖ್ವಿ ಐಷಾರಾಮಿ ಜೀವನ

ಇಸ್ಲಾಮಾಬಾದ್: 2008ರ ಮುಂಬೈ ದಾಳಿ ಮಾಸ್ಟರ್ ಮೈಂಡ್, ಲಷ್ಕರ್ ಇ ತೊಯ್ಬಾ ಕಮಾಂಡರ್ ಝಕಿ ಉರ್ ರೆಹಮಾನ್ ಲಖ್ವಿಗೆ ಪಾಕ್ ಜೈಲಿನಲ್ಲಿ ಐಶಾರಾಮಿ ಜೀವನದ ನಡೆಸುತ್ತಿದ್ದಾನೆ.

ಪಾಕಿಸ್ತಾನದ ಕೈದಿಯಾಗಿರುವ 55ವರ್ಷದ ಲಖ್ವಿ ರಾವಲ್ಪಿಂಡಿಯಾ ಅತ್ಯಂತ ಬಿಗಿ ಭದ್ರತೆಯ ಅಡಿಯಾಲಾ ಜೈಲಿನಲ್ಲಿ ಐಶಾರಾಮದ ಜೀವನ ನಡೆಸುತ್ತಿದ್ದಾನೆ. ಲಖ್ವಿಗೆ ಜೈಲಿನೊಳಗೆ ಇಂಟರ್ನೆಟ್, ಮೊಬೈಲ್ ಫೋನ್, ಟಿವಿ ಹಾಗೂ ಹಗಲು, ರಾತ್ರಿ ಎನ್ನದೆ ಆತನನ್ನು ಭೇಟಿ ಮಾಡುವ ವ್ಯವಸ್ಥೆಯನ್ನೂ ಮಾಡಿಕೊಡಲಾಗಿದೆಯಂತೆ ಎನ್ನಲಾಗಿದೆ ಎಂದು ಬಿಬಿಸಿ ಉರ್ದು ವರದಿ ಮಾಡಿದೆ.

2008ರ ನವೆಂಬರ್ ನಲ್ಲಿ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಆಗಿದ್ದ ಲಖ್ವಿ, ಅಬ್ದುಲ್ ವಾಜಿದ್, ಮಝರ್ ಇಕ್ಬಾಲ್, ಹಮಾದ್ ಅಮೀನ್ ಸಾದಿಕ್, ಶಾಹೀದ್ ಜಮೀಲ್ ರಿಯಾಜ್, ಜಮೀಲ್ ಅಹ್ಮದ್ ಮತ್ತು ಯೂನಿಸ್ ಅಂಜುಮ್ ಆರೋಪಿಗಳಾಗಿದ್ದಾರೆ. ಈ ದಾಳಿಯಲ್ಲಿ 166 ಮಂದಿ ಬಲಿಯಾಗಿದ್ದರು.

ಉಗ್ರ ಲಖ್ವಿಯನ್ನು ಪ್ರತಿ ದಿನ ನೂರು ಮಂದಿ ಜೈಲಿಗೆ ಬಂದು ಭೇಟಿ ಮಾಡುತ್ತಾರೆ. ಅವರನ್ನು ಲಖ್ವಿಯ ಖಾಸಗಿ ಕೋಣೆಗೆ ಭದ್ರತೆ ಮೇಲೆ ಕರೆದೊಯ್ಯುತ್ತಾರೆಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ ಎಂದು ವರದಿ ವಿವರಿಸಿದೆ.

Related Stories

No stories found.

Advertisement

X
Kannada Prabha
www.kannadaprabha.com