ವಿಶೇಷ ಕಾರಣಗಳು ನೀಡಿದರೆ ಅತ್ಯಾಚಾರಿಗಳಿಗೆ ಶಿಕ್ಷೆ ಕಡಿಮೆ: ಸುಪ್ರೀಂ

ಅತ್ಯಾಚಾರ ಪ್ರಕರಣಗಳಲ್ಲಿ ಭಾಗಿಯಾಗಿ ಅಪರಾಧಿಗಳಾಗಿರುವವರು ನಿರ್ದಿಷ್ಟ ಹಾಗೂ ವಿಶೇಷ ಕಾರಣಗಳನ್ನು ನೀಡಿದರೆ ಶಿಕ್ಷೆ ಪ್ರಮಾಣ ಕಡಿಮೆ ಮಾಡಲಾಗುತ್ತದೆ ಎಂದು ಭಾನುವಾರ ಸುಪ್ರೀಂ ಕೋರ್ಟ್ ಹೇಳಿದೆ...
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್
Updated on

ನವದೆಹಲಿ: ಅತ್ಯಾಚಾರ ಪ್ರಕರಣಗಳಲ್ಲಿ ಭಾಗಿಯಾಗಿ ಅಪರಾಧಿಗಳಾಗಿರುವವರು ನಿರ್ದಿಷ್ಟ ಹಾಗೂ ವಿಶೇಷ ಕಾರಣಗಳನ್ನು ನೀಡಿದರೆ ಶಿಕ್ಷೆ ಪ್ರಮಾಣ ಕಡಿಮೆ ಮಾಡಲಾಗುತ್ತದೆ ಎಂದು ಭಾನುವಾರ ಸುಪ್ರೀಂ ಕೋರ್ಟ್ ಹೇಳಿದೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376ರ ಅಡಿಯಲ್ಲಿ ಅತ್ಯಾಚಾರಿಗೆ ಕನಿಷ್ಠ ಶಿಕ್ಷೆಯೆಂದರೆ ಹತ್ತು ವರ್ಷಗಳ ಕಠಿಣ ಶಿಕ್ಷೆ. ಆದರೆ ಈ ಶಿಕ್ಷೆಯನ್ನು ಪಡೆದ ಅಪರಾಧಿಗಳು ಪ್ರಕರಣ ಸಂಬಂಧ ವಿಶೇಷ ಕಾರಣಗಳು ನೀಡಿದರೆ ನ್ಯಾಯಾಧೀಶರು ಶಿಕ್ಷೆಯನ್ನು ಕಡಿಮೆ ಮಾಡಬಹುದು ಎಂದು ತಿಳಿಸಿದೆ.

ಮಧ್ಯಪ್ರದೇಶದ ನಿವಾಸಿಯಾಗಿದ್ದ ರವೀಂದ್ರ (20) ಎಂಬಾತ 1994 ಆಗಸ್ಟ್ 24ರಂದು ಅತ್ಯಾಚಾರ ಪ್ರಕರಣವೊಂದರಲ್ಲಿ ಭಾಗಿಯಾಗಿ ಅಪರಾಧಿ ಎಂದು ಸಾಬೀತಾಗಿತ್ತು. ಈ ಪ್ರಕರಣ ಸಂಬಂಧ ವಿಚಾರಣಾ ನ್ಯಾಯಾಲಯವು ಅಪರಾಧಿಗೆ ಸೆಕ್ಷನ್ 376 ರ ಅಡಿಯಲ್ಲಿ 10 ವರ್ಷ ಜೈಲು ಶಿಕ್ಷೆಯನ್ನು ನೀಡಿತ್ತು.

ಪ್ರಕರಣದಲ್ಲಿ ಅತ್ಯಾಚಾರಕ್ಕೊಳಗಾದ ಯುವತಿ ಈಗಾಗಲೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಆರೋಪಿ ವಿರುದ್ಧದ ಪ್ರಕರಣವನ್ನು ಮುಂದುವರೆಸುವುದಿಲ್ಲ ಎಂದು ಹೇಳಿ ಅಪರಾಧಿ ವಿರುದ್ಧ ದಾಖಲು ಮಾಡಿದ್ದ ದೂರನ್ನು 2013ರಲ್ಲಿ ಹಿಂಪಡೆದಿದ್ದಳು. ಯುವತಿಯ ಈ ಮನವಿಯನ್ನು ತಿರಸ್ಕರಿಸಿದ್ದ ಮಧ್ಯಪ್ರದೇಶದ ಹೈ ಕೋರ್ಟ್ ಅತ್ಯಾಚಾರ ಪ್ರಕರಣದಲ್ಲಿ ಕಾನೂನು ಪುರಾವೆಗಳು ಧೃಢೀಕರಿಸುವ ಅಗತ್ಯವಿಲ್ಲ, ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿ ಭಾಗಿಯಾಗಿರುವುದು ಸಾಬೀತಾಗಬೇಕಿರುವುದು ಮುಖ್ಯ ಎಂದು ಹೇಳಿ ಅಪರಾಧಿಯ ಶಿಕ್ಷೆಯನ್ನು ಮುಂದುವರೆಸುವಂತೆ ಆದೇಶ ನೀಡಿತ್ತು.
ಮಧ್ಯಪ್ರದೇಶ ಹೈಕೋರ್ಟ್‌ನ ಈ ಆದೇಶವನ್ನು ಪರಿಶೀಲಿಸಿದ ನ್ಯಾಯಾಧೀಶರಾದ  ಇಕ್ಬಾಲ್ ಮತ್ತು ಪಿನಾಕಿ ಚಂದ್ರ ಘೋಷ್ ಅವರಿದ್ದ ನ್ಯಾಯಪೀಠವು ಅತ್ಯಾಚಾರಕ್ಕೊಳಪಟ್ಟ ಯುವತಿ ಪ್ರಕರಣ ಸಂಬಂಧ ರಾಜಿಯಾಗಲು ಒಪ್ಪಿಗೆ ನೀಡಿದ್ದು, ತಾನು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದೇನೆ. ಪ್ರಕರಣವನ್ನು ಮುಂದುವರೆಸುವುದು ನನಗೆ ಇಷ್ಟವಿಲ್ಲ ಎಂದು ಹೇಳುವ ಮೂಲಕ ಧೃಢ ಹಾಗೂ ವಿಶೇಷ ಕಾರಣವನ್ನು ನೀಡಿದ್ದಾರೆ. ಭಾರತೀಯ ಸಂವಿಧಾನದ 376ರ ಅಡಿಯಲ್ಲಿ ಕಾನೂನು ಶಿಕ್ಷೆಯನ್ನು ಪಡೆದ ಅಪರಾಧಿಗಳು ಪ್ರಕರಣ ಸಂಬಂಧ ವಿಶೇಷ ಕಾರಣಗಳು ನೀಡಿದರೆ ನ್ಯಾಯಾಧೀಶರು ಶಿಕ್ಷೆಯನ್ನು ಕಡಿಮೆ ಮಾಡಬಹುದು ಎಂದು ಹೇಳಿದೆ. ಈ ಪ್ರಕರಣದಲ್ಲಿ ನಿರ್ದಿಷ್ಟ ಹಾಗೂ ವಿಶೇಷವನ್ನು ಕಾರಣವನ್ನು ಯುವತಿ ನೀಡುತ್ತಿರುವುದರಿಂದ ಪ್ರಕರಣದಲ್ಲಿ ಅಪರಾಧಿಯ ಶಿಕ್ಷೆಯನ್ನು ಕಡಿತಗೊಳಿಬಹುದು ಎಂದು ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com