ಬ್ಲ್ಯಾಕ್ ಬಾಕ್ಸ್ ಪತ್ತೆಗೆ ವಾರ ಕಾಯಬೇಕು!

ಸಮುದ್ರದಲ್ಲಿ ಭಾರಿ ಎತ್ತರದ ಅಲೆಗಳು ಕಾಣಿಸಿಕೊಳ್ಳುತ್ತಿದ್ದು, ವಿಮಾನದ ಅವಶೇಷ ಪತ್ತೆಹಚ್ಚುವುದು ಕಷ್ಟ...
ಏರ್ ಏಷ್ಯಾ ವಿಮಾನದ ಬ್ಲ್ಯಾಕ್ ಬಾಕ್ಸ್ ಪತ್ತೆಗೆ ಹವಾಮಾನ ಅಡ್ಡಿ
ಏರ್ ಏಷ್ಯಾ ವಿಮಾನದ ಬ್ಲ್ಯಾಕ್ ಬಾಕ್ಸ್ ಪತ್ತೆಗೆ ಹವಾಮಾನ ಅಡ್ಡಿ

ಜಕಾರ್ತ/ಸಿಂಗಾಪುರ: ಅನುಮಾನಾಸ್ಪದ ರೀತಿಯಲ್ಲಿ ಪತನಗೊಂಡಿರುವ ಇಂಡೋನೇಷ್ಯಾದ ಏರ್ ಏಷ್ಯಾ ವಿಮಾನದ ಬ್ಲ್ಯಾಕ್ ಬಾಕ್ಸ್ ಪತ್ತೆಗೆ ವಾರ ಕಾಲ ಕಾಯುವುದು ಅನಿವಾರ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಾವಾ ಸಮುದ್ರದಲ್ಲಿ ಪತನಗೊಂಡಿದೆ ಎನ್ನಲಾಗಿರುವ ಈ ವಿಮಾನದ ಹುಡುಕಾಟಕ್ಕೆ ಪ್ರತಿಕೂಲ ಹವಾಮಾನ ಅಡ್ಡಿಯಾಗಿದೆ. ಸಮುದ್ರದಲ್ಲಿ ಭಾರಿ ಎತ್ತರದ ಅಲೆಗಳು ಕಾಣಿಸಿಕೊಳ್ಳುತ್ತಿದ್ದು, ಇದರಿಂದ ವಿಮಾನದ ಅವಶೇಷ ಪತ್ತೆಹಚ್ಚುವುದು ಕಷ್ಟವಾಗುತ್ತಿದೆ.

ಸಮುದ್ರ ಶಾಂತಗೊಂಡ ಬಳಿಕವಷ್ಟೇ ಪತ್ತೆ ಕಾರ್ಯ ಚುರುಕುಗೊಳ್ಳಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮತ್ತೊಂದು ಶವಪತ್ತೆ: ಈ ನಡುವೆ, ಇಂಡೋನೇಷ್ಯಾದ ಪೆಂಗ್‌ಕಲಾನ್ ಕಡಲ ತೀರದಿಂದ 70ಕಿ.ಮೀ. ದೂರದಲ್ಲಿ ಮತ್ತೊಂದು ಶವ ಪತ್ತೆಯಾಗಿದ್ದು, ಈ ಮೂಲಕ ಒಟ್ಟು 8 ಮಂದಿ ಶವ ಪತ್ತೆಯಾದಂತಾಗಿದೆ. ದುರಂತಕ್ಕೀಡಾದ ಏರ್‌ಏಷ್ಯಾ ವಿಮಾನದಲ್ಲಿ 155 ಮಂದಿ ಪ್ರಯಾಣಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com