ಮಾಹಿತಿ ಸೋರಿಕೆಗೆ ಎಚ್ಚರಿಕೆ ವಹಿಸಿ

ಪ್ರಮುಖ ಮಾಹಿತಿಗಳು ದೂರಸಂಪರ್ಕ ಇಲಾಖೆ ಮೂಲಕ ಆಗಾಗ ಸೋರಿಕೆಯಾಗುತ್ತಿತ್ತು...
ಪ್ರಧಾನ ಮಂತ್ರಿಗಳ ಭದ್ರತಾ ಸಲಹೆಗಾರ ಅಜಿತ್ ಧೋವಲ್
ಪ್ರಧಾನ ಮಂತ್ರಿಗಳ ಭದ್ರತಾ ಸಲಹೆಗಾರ ಅಜಿತ್ ಧೋವಲ್

ನವದೆಹಲಿ: ಮಹತ್ವದ ಮಾಹಿತಿಗಳು ಮಾಧ್ಯಮಕ್ಕೆ ಸೋರಿಕೆಯಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಪ್ರಧಾನ ಮಂತ್ರಿಗಳ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಅವರು ಗೃಹ, ರಕ್ಷಣೆ ಸೇರಿ ವಿವಿಧ ಸಚಿವಾಲಯಗಳಿಗೆ ಸೂಚಿಸಿದ್ದಾರೆ.

ಜತೆಗೆ, ಈ ರೀತಿ ಮಹತ್ವದ ಮಾಹಿತಿಗಳನ್ನು ಸೋರಿಕೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಸೂಚಿಸಿದ್ದಾರೆ. ವಾಣಿಜ್ಯ ಉದ್ದೇಶಕ್ಕಾಗಿ ಗುಪ್ತಚರದಳ ಹಾಗೂ ರಕ್ಷಣಾ ಸಚಿವಾಲಯಕ್ಕೆ ಸಂಬಂಧಿಸಿದ ಪ್ರಮುಖ ಮಾಹಿತಿಗಳು ದೂರಸಂಪರ್ಕ ಇಲಾಖೆ ಮೂಲಕ ಆಗಾಗ ಸೋರಿಕೆಯಾಗುತ್ತಿತ್ತು.

ಕಾಪೋರೇಟರ್ ಕಂಪನಿಗಳಲ್ಲಿ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿರುವವರು ವಾಣಿಜ್ಯ ಉದ್ದೇಶಕ್ಕಾಗಿ ಈ ರೀತಿ ಮಾಹಿತಿಯನ್ನು ಸೋರಿಕೆ ಮಾಡುತ್ತಿದ್ದರು.

ನೌಕಾ ಸೇನೆಗೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಿದ್ದ ವಿವರಣೆ ಟಿವಿ ಮಾಧ್ಯಮಕ್ಕೆ ಸೋರಿಕೆಯಾದ ಬಳಿಕ ಅಜಿತ್ ಧೋವಲ್ ಅಚ್ಚರಿಗೊಂಡಿದ್ದರು. ಆ ಬಳಿಕ ಅವರು ಮಾಹಿತಿ ಸೋರಿಕೆ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com