
ನವದೆಹಲಿ: 'ಎಲ್ಲವೂ ಸರಿ. ಭೂಸ್ವಾಧೀನ ಮಸೂದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿ ಮಾಡಬೇಕೇ?'
ಹೀಗೆಂದು ಕೇಂದ್ರ ಸರ್ಕಾರಕ್ಕೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪ್ರಶಿಸಿದ್ದರೇ? ಹೌದೆನ್ನುತ್ತವೆ ಮೂಲಗಳು.
ಕೆಲ ದಿನಗಳ ಹಿಂದಷ್ಟೇ ಕೇಂದ್ರ ಸಂಪುಟ ಅಂಗೀಕರಿಸಿದ್ದ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಸಹಿ ಹಾಕಿದ್ದರು. ಆದರೆ ಕಡತಕ್ಕೆ ಸಹಿ ಹಾಕುವ ಮುನ್ನ ಮುಖರ್ಜಿಯವರು ಹಣಕಾಸಿ ಸಚಿವ ಅರುಣ್ ಜೇಟ್ಲಿ ಜತೆ ಚರ್ಚಿಸಿದ್ದರು ಎಂದು ಹೇಳಲಾಗಿದೆ. ಅವಸರವಾಗಿ ಸುಗ್ರೀವಾಜ್ಞೆ ಮೂಲಕ ಜಾರಿ ಮಾಡುವ ತುರ್ತು ಏನಿದೆ ಎಂದು ಪ್ರಶ್ನಿಸಿದ್ದರು ಎಂದು ಹೇಳಲಾಗಿದೆ.
ಇದಾದ ಬಳಿಕ ಹಣಕಾಸು ಸಚಿವ ಜೇಟ್ಲಿ, ಕಾನೂನು ಸಚಿವ ಡಿ.ವಿ.ಸದಾನಂದಗೌಡ ಮತ್ತು ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಖುದ್ದಾಗಿ ರಾಷ್ಟ್ರಪತಿ ಭವನಕ್ಕೆ ತೆರಳಿ ಸರ್ಕಾರದ ಅಗತ್ಯವನ್ನು ಮುಖರ್ಜಿಗೆ ಮನವರಿಕೆ ಮಾಡಿಕೊಟ್ಟರು. ಇದಾದ ಬಳಿಕ ಕಡತಕ್ಕೆ ಸಹಿ ಹಾಕಲು ಒಪ್ಪಿದರು.
Advertisement