ಕಿಂಗ್ ಫಿಶರ್ ವಿರುದ್ಧ ಅರ್ಜಿ ದಾಖಲು

ಕಿಂಗ್ ಫಿಶರ್ ವಿಮಾನಕ್ಕೆಂದು ಅಂತಾರಾಷ್ಟ್ರೀಯ ಕಂಪನಿಗಳಿಂದ ...
ಕಿಂಗ್ ಫಿಶರ್
ಕಿಂಗ್ ಫಿಶರ್

ಬೆಂಗಳೂರು: ಕಿಂಗ್ ಫಿಶರ್ ವಿಮಾನಕ್ಕೆಂದು ಅಂತಾರಾಷ್ಟ್ರೀಯ ಕಂಪನಿಗಳಿಂದ ವಿಮಾನದ ಎಂಜಿನ್ ಹಾಗೂ ತಂತ್ರಜ್ಞಾನ ಸಹಾಯ ಪಡೆದು ಬಾಕಿ ಹಣ ವಾಪಸ್ ಮಾಡದ ಹಿನ್ನೆಲೆಯಲ್ಲಿ ಕಿಂಗ್ ಫಿಶರ್ ವಿರುದ್ದ ಸಲ್ಲಿಸಲಾದ ಆರು ಬರ್ಖಾಸ್ತು ಅರ್ಜಿಯನ್ನು ಹೈಕೋರ್ಟ್ ದಾಖಲಿಸಿಕೊಂಡಿದೆ.

ಇಂಗ್ಲೆಂಡ್ ಹಾಗೂ ಸ್ವಿಜರ್ಲೆಂಡ್‌ನ ಸಂಸ್ಥೆಯಿಂದ ತಾಂತ್ರಿಕ ಸಹಾಯ ಪಡೆದುಕೊಂಡಿದ್ದು, ಕಿಂಗ್‌ಫಿಶರ್ ಸಂಸ್ಥೆ ಬಾಕಿ ಹಣ ನೀಡಲು ವಿಫಲವಾಗಿತ್ತು. ಬಾಕಿ ಹಣ ನೀಡದ ಹಿನ್ನೆಲೆಯಲ್ಲಿ ಈ ಸಂಸ್ಥೆಗಳು ಹೈ ಕೋರ್ಟ್ ಮೆಟ್ಟಿಲೇರಿವೆ. ಅರ್ಜಿ ಕೈಗೆತ್ತಿಕೊಂಡ ನ್ಯಾ.ಎ.ಎಸ್.ಬೋಪಣ್ಣ ಅವರ ಪೀಠ ವಿಚಾರಣೆಯನ್ನು ಮುಂದೂಡಿದೆ.

ವಿಚಾರಣೆ ವೇಳೆ ಕಿಂಗ್‌ಫಿಶರ್ ಸಂಸ್ಥೆ ಪರ ವಕೀಲರು, ಈಗಾಗಲೇ ಸಂಸ್ಥೆ 1250 ಕೋಟಿ ಸಂದಾಯ ಮಾಡಿದ್ದು ಬಾಕಿ ಹಣ ನೀಡಲು ಕಾಲಾವಕಾಶ ಕೋರಲಾಗಿದೆ ಎಂಬುದನ್ನು ಪೀಠದ ಗಮನಕ್ಕೆ ತಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com