ಲಖ್ವಿ ಜಾಮೀನನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಪಾಕ್ ಸರ್ಕಾರ

ಮುಂಬೈ ದಾಳಿ ರುವಾರಿ ಮತ್ತು ಜಮಾತ್ ಉದ್ ದವಾ ಮುಖ್ಯಸ್ಥ ಝಕಿವುರ್ ರೆಹಮಾನ್ ಲಖ್ವಿಗೆ...
ಉಗ್ರ ಝಕಿವುರ್ ರೆಹಮಾನ್ ಲಖ್ವಿ
ಉಗ್ರ ಝಕಿವುರ್ ರೆಹಮಾನ್ ಲಖ್ವಿ

ಇಸ್ಲಾಮಾಬಾದ್: ಮುಂಬೈ ದಾಳಿ ರುವಾರಿ ಮತ್ತು ಜಮಾತ್ ಉದ್ ದವಾ ಮುಖ್ಯಸ್ಥ ಝಕಿವುರ್ ರೆಹಮಾನ್ ಲಖ್ವಿಗೆ ಜಾಮೀನು ನೀಡಿರುವ ಕ್ರಮವನ್ನು ಪ್ರಶ್ನಿಸಿ ಇಸ್ಲಾಮಾಬಾದ್ ಹೈಕೋರ್ಟ್‌ನಲ್ಲಿ ಪಾಕಿಸ್ತಾನ ಸರ್ಕಾರ ಅರ್ಜಿ ಸಲ್ಲಿಸಿದೆ.

ಭಯೋತ್ರಾದನಾ ನಿಗ್ರಹ ವಿಶೇಷ ನ್ಯಾಯಾಲಯ ಲಖ್ವಿಗೆ ನೀಡಿರುವ ಜಾಮೀನನ್ನು ಪ್ರಶ್ನಿಸಿ ಪಾಕಿಸ್ತಾನದ ಸರ್ಕಾರ ಇಸ್ಲಾಮಾಬಾದ್‌ನಲ್ಲಿ ಅರ್ಜಿ ಸಲ್ಲಿಸಿದೆ.

ಈ ಹಿಂದೆ ಉಗ್ರ ಲಖ್ವಿಗೆ ಜಾಮೀನು ದೊರೆಯುತ್ತಿದ್ದಂತೆಯೇ ಭಾರತ ಮತ್ತು ವಿಶ್ವ ಸಮುದಾಯದ ಒತ್ತಾಯಕ್ಕೆ ಮಣಿದಿದ್ದ ಪಾಕಿಸ್ತಾನ ಸರ್ಕಾರ ಕಾನೂನು ಸುವ್ಯವಸ್ಥೆ ವಿಚಾರ ಮುಂದಿಟ್ಟು ಆತನನ್ನು ಬಂಧನಕ್ಕೊಳಪಡಿಸಿತ್ತು.

ಆದರೆ ಉಗ್ರ ಲಖ್ವಿ ಪಾಕಿಸ್ತಾನ ಸರ್ಕಾರದ ಈ ನಿರ್ಧಾರವನ್ನು ಇಸ್ಲಾಮಾಬಾದ್ ನ್ಯಾಯಾಲಯಲ್ಲಿ ಪ್ರಶ್ನಿಸಿದ್ದ. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಕಳೆದ ವಾರ ಲಖ್ವಿ ವಿರುದ್ಧ ಬಂಧನ ಆದೇಶ ರದ್ದುಗೊಳಿಸಿತ್ತು.

ಈ ಮಧ್ಯೆ ಲಖ್ವಿ ವಿರುದ್ಧ ಮತ್ತೆ ಹೊಸ ಕೇಸ್ ದಾಖಲಿಸಿದ ಪಾಕ್ ಸರ್ಕಾರ ಆತನನ್ನು ಮತ್ತೆ ಬಂಧನಕ್ಕೊಳಪಡಿಸಿತು. ಅನ್ವರ್ ಎಂಬಾತನನ್ನು ಅಪಹರಣ ಮಾಡಿದ ಆರೋಪದ ಮೇಲೆ ಲಖ್ವಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com