ಮಣಿಪುರ ಶಾಲಾ ಆವರಣದಲ್ಲಿ 8 ಮಾನವ ಬುರುಡೆಗಳು ಪತ್ತೆ

30ಕ್ಕೂ ಅಧಿಕ ಮಂದಿ ಕಾಣೆಯಾಗಿರುವ ಬಗ್ಗೆ ವರದಿಯಾಗಿದೆ...
ಮಾನವ ಬುರುಡೆಗಳು
ಮಾನವ ಬುರುಡೆಗಳು

ಇಂಪಾಲ: ಮಣಿಪುರದ ಇಂಪಾಲ ಬಳಿ ಇತ್ತೀಚೆಗೆ ಭೂಮಿ ಅಗೆಯುತ್ತಿದ್ದಾಗೆ ಸುಮಾರು 8 ಮಾನವ ಬುರುಡೆಗಳು ಪತ್ತೆಯಾಗಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಪತ್ತೆಯಾಗಿರುವ ಬುರುಡೆಗಳು ಸುಮಾರು 20 ರಿಂದ 50 ವರ್ಷ ವಯಸ್ಸಿನ ಮಾನವ ಬುರುಡೆಗಳು ಎಂದು ತಿಳಿದುಬಂದಿದೆ.

ಇಂಪಾಲದ ತೊಂಬಿಸಾನ ಪ್ರೌಢಶಾಲೆಯ ಸಮೀಪ ಇತ್ತೀಚೆಗೆ ಭೂಮಿ ಅಗೆಯುವ ಕಾಮಗಾರಿ ಕೈಗೊಳ್ಳಲಾಗಿತ್ತು. ಈ ವೇಳೆ 8 ಮಾನವ ಬುರುಡೆಗಳು ಹಾಗೂ ಅಸ್ಥಿ ಪಂಜರಗಳು ಪತ್ತೆಯಾಗಿವೆ.

ಈ ಸಂಬಂಧ ವಿಶೇಷ ತನಿಖಾ ತಂಡ ರಚಿಸಬೇಕೆಂದು ಮಣಿಪುರ ನಾಗರೀಕ ಹಕ್ಕುಗಳ ಆಯೋಗ ಸರ್ಕಾರವನ್ನು ಒತ್ತಾಯಿಸಿದೆ.

ಮಣಿಪುರ ಸಾಮಾಜಿಕ ಕಾರ್ಯಕರ್ತ ಖೈದೀಮ್ ಮಣಿ ಮಾತನಾಡಿ, 1958ರ ಸಶಸ್ತ್ರ ಪಡೆಯ ವಿಶೇಷ ಅಧಿಕಾರ ಕಾನೂನನ್ನು 1980ರಲ್ಲಿ ಮಣಿಪುರ ಮತ್ತು ಅಸ್ಸಾಂನಲ್ಲಿ ಜಾರಿಗೊಳಿಸಲಾಗಿತ್ತು. ಅಂದಿನಿಂದ ಅಂದರೆ 1980ರಿಂದ ಸುಮಾರು 30ಕ್ಕೂ ಅಧಿಕ ಮಂದಿ ಕಾಣೆಯಾಗಿರುವ ಬಗ್ಗೆ ವರದಿಯಾಗಿದೆ.

ಈ ಹಿನ್ನೆಲೆಯಲ್ಲಿ ಪತ್ತೆಯಾಗಿರುವ ಮಾನವ ಬರುಡೆಗಳ ಕುರಿತು ಸರ್ಕಾರ ವಿಶೇಷ ತನಿಖಾ ತಂಡ ರಚಿಸಿ, ಬುರೆಡೆಗಳ ಹಿಂದಿನ ರಹಸ್ಯವನ್ನು ಪತ್ತೆಹಚ್ಚಬೇಕು ಎಂದು ಒತ್ತಾಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com