
ಚೆನ್ನೈ: ಕ್ಯಾಂಟೀನ್ ಆಯ್ತು, ನೀರಾಯ್ತು. ಈಗ ಮಾಜಿ ಮುಖ್ಯಮಂತ್ರಿ ಜಯಲಲಿತಾ ಹೆಸರಿನಲ್ಲಿ ಸಿಮೆಂಟ್ ವಿತರಿಸಲು ತಮಿಳುನಾಡು ಸರ್ಕಾರ ನಿರ್ಧರಿಸಿದೆ.
ರಾಜ್ಯದ ಬಡವರಿಗೆ ಎಐಎಡಿಎಂಕೆ ಸರ್ಕಾರ ಇನ್ನು ಸಬ್ಸಿಡಿ ದರಲ್ಲಿ 'ಅಮ್ಮ ಸಿಮೆಂಟ್' ವಿತರಿಸಲಿದೆ. ಯೋಜನೆಯಂತ ಸರ್ಕಾರ ಖಾಸಗಿ ಕಂಪನಿಗಳಿಂದ 2 ಲಕ್ಷ ಟನ್ ಸಿಮೆಂಟ್ ಖರೀದಿಸಲಿದೆ.
ಪ್ರತಿ ಬ್ಯಾಗ್‌ಗೆ ತಲಾ ರು.190ರಂತೆ ಕಾರ್ಪೋರೇಷನ್, ನಗರಸಭೆ, ಪುರಸಭೆ ಮೂಲಕ ಬಡವರಿಗೆ ವಿತರಿಸಲಿದೆ. ಮೊದಲ ಹಂತದಲ್ಲಿ ಈ ಅಮ್ಮ ಸಿಮೆಂಟ್ ಯೋಜನೆಗೆ ತಿರುಚಿನಾಪಳ್ಳಿಯಲ್ಲಿ ಚಾಲನೆ ನೀಡಲಾಗಿದೆ.
Advertisement