ಶಿಕ್ಷೆಗೆ ಗುರಿಯಾಗಿರುವ ದಂಪತಿ ಮಕ್ಕಳನ್ನು ಪಡೆಯಲು 'ಸೆಕ್ಸ್‌' ಮಾಡಬಹುದು: ಕೋರ್ಟ್

ಹರಿಯಾಣ-ಪಂಜಾಬ್ ಕೋರ್ಟ್
ಹರಿಯಾಣ-ಪಂಜಾಬ್ ಕೋರ್ಟ್

ಚಂಡಿಗಢ: ಜೈಲು ಶಿಕ್ಷೆಗೆ ಗುರಿಯಾಗಿರುವ ದಂಪತಿಗಳು ಮಕ್ಕಳಿಗಾಗಿ ಲೈಂಗಿಕ ಕ್ರಿಯೆ ನಡೆಸಬಹುದು ಎಂಬ ಮಹತ್ವದ ಆದೇಶವೊಂದನ್ನು ಹರಿಯಾಣ-ಪಂಜಾಬ್ ಹೈಕೋರ್ಟ್ ನೀಡಿದೆ.

16 ವರ್ಷದ ಬಾಲಕನ ಅಪಹರಣ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಸ್ವೀರ್ ಸಿಂಗ್, ಸೋನಿಯಾ ದಂಪತಿಗಳು ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದರು. ಈ ದಂಪತಿಗಳು ಮಗುವನ್ನು ಹೊಂದುವ ಬಯಕೆ ಹೊಂದಿದ್ದು ಈ ಸಂಬಂಧ ಹರಿಯಾಣ ಪಂಜಾಬ್ ಹೈಕೋರ್ಟ್‌ಗೆ ಅರ್ಜಿಯೊಂದನ್ನು ಸಲ್ಲಿಸಿದ್ದರು.

ಈ ಅರ್ಜಿಯನ್ನು ಪುರಸ್ಕರಿಸಿದ ಕೋರ್ಟ್ ಕೌಟುಂಬಿಕ ಭೇಟಿಗೆ ಅವಕಾಶ ಕಲ್ಪಿಸುವಂತೆ ಹರಿಯಾಣ-ಪಂಜಾಬ್ ಹೈಕೋರ್ಟ್‌ನ ನ್ಯಾಯಮೂರ್ತಿ ಸೂರ್ಯಕಾಂತ ಅವರು ಜೈಲು ಸುಧಾರಣಾ ಸಮಿತಿಗೆ ಸೂಚಿಸಿದ್ದಾರೆ.

ಜಸ್ವೀರ್ ಸಿಂಗ್ ತಮ್ಮ ಅರ್ಜಿಯಲ್ಲಿ ತಮ್ಮ ಪೋಷಕರಿಗೆ ತಾನು ಒಬ್ಬನೇ ಮಗನಾಗಿದ್ದು, ಜೈಲು ಪಾಲಾಗುವ ಕೇವಲ 8 ತಿಂಗಳ ಹಿಂದಷ್ಟೇ ವಿವಾಹವಾಗಿರುತ್ತೇನೆ. ಮಕ್ಕಳನ್ನು ಪಡೆಯುವ ಬಯಕೆಯಿಂದ ಈ ಬೇಡಿಕೆ ಕೋರ್ಟ್ ಮುಂದಿಟ್ಟಿದ್ದೇನೆ ಹೊರತು ಯಾವುದೇ ರೀತಿಯ ದುರಾಸೆಯಿಂದಲ್ಲ ಎಂಬುದನ್ನು ನಮೂದಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com