ಬ್ಯಾಂಕ್ ಸಾಲ ವಾಪಸ್ ಮಾಡದ ಮಲ್ಯ

ಎಸ್‌ಬಿಐ ಸೇರಿ ಇತರೆ 14 ಬ್ಯಾಂಕುಗಳಿಂದ ಸಾಲ ಪಡೆದು ವಾಪಸ್ ಮಾಡದ ಹಿನ್ನೆಲೆ...
ಕಿಂಗ್ ಫಿಶರ್‌ನ ಮುಖ್ಯಸ್ಥ ಡಾ.ವಿಜಯ್ ಮಲ್ಯ
ಕಿಂಗ್ ಫಿಶರ್‌ನ ಮುಖ್ಯಸ್ಥ ಡಾ.ವಿಜಯ್ ಮಲ್ಯ

ಬೆಂಗಳೂರು: ಎಸ್‌ಬಿಐ ಸೇರಿ ಇತರೆ 14 ಬ್ಯಾಂಕುಗಳಿಂದ ಸಾಲ ಪಡೆದು ವಾಪಸ್ ಮಾಡದ ಹಿನ್ನೆಲೆಯಲ್ಲಿ ಕಿಂಗ್ ಫಿಶರ್‌ನ ಮುಖ್ಯಸ್ಥ ಡಾ.ವಿಜಯ್ ಮಲ್ಯ ಅವರಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.

ಎಸ್‌ಬಿಐ ಹಾಗೂ ಇತರೆ 14 ಬ್ಯಾಂಕ್‌ಗಳಲ್ಲಿ ಉದ್ಯಮದ ಬೆಳವಣಿಗೆಗಾಗಿ ವಿಜಯ್ ಮಲ್ಯ ಸಾಲ ಪಡೆದಿದ್ದರು. ನಂತರ ಅದನ್ನು ವಾಪಸ್ ಮಾಡದ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳು ಸಾಲ ವಸೂಲಿತಿ ನ್ಯಾಯಾಧೀಕರಣ (ಡಿಆರ್‌ಟಿ) ಮೊರೆ ಹೋಗಿ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವುದಾಗಿ ತಿಳಿಸಿದವು.

ಅದಕ್ಕೆ ಒಪ್ಪದ ವಿಜಯ್ ಮಲ್ಯ ಸಾಲವನ್ನು ತೀರಿಸುವುದಾಗಿ ಮೌಖಿಕವಾಗಿ ಬ್ಯಾಂಕ್‌ಗಳಿಗೆ ಭರವಸೆ ನೀಡಿ ಆಸ್ತಿ ಮುಟ್ಟುಗೋಲಿಗೆ ಅವಕಾಶ ನೀಡುವುದಿಲ್ಲ ಎಂದಿದ್ದರು. ಆದರೆ, ಈವರೆಗೂ ಸಾಲ ವಾಪಸ್ ಮಾಡದ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳು ಹೈಕೋರ್ಟ್‌ನಲ್ಲಿ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿವೆ. ಮಂಗಳವಾರ ವಿಚಾರಣೆ ನಡೆಸಿದ ನ್ಯಾ.ಎನ್.ಕೆ.ಪಾಟೀಲ್ ಮತ್ತು ನ್ಯಾ.ಜಿ.ನರೇಂದರ್ ಅವರ ವಿಭಾಗೀಯ ಪೀಠ, ಪ್ರಕರಣ ಕುರಿತು ವಿಜಯ ಮಲ್ಯಗೆ ನೋಟಿಸ್ ಜಾರಿ ಮಾಡಿ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ ವಿಚಾರಣೆ ಮುಂದೂಡಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com