ನವದೆಹಲಿ: ಗಂಗೆಯನ್ನು ಶುದ್ದೀಕರಿಸಲು ಪಣ ತೊಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಅವರು ಈಗ ಪವಿತ್ರ ನದಿಯನ್ನು ಮಲಿನಗೊಳಿಸುತ್ತಿರುವ ಕಾರ್ಖಾನೆಗಳ ವಿರುದ್ಧ ಕೆಂಡಕಾರಿದ್ದಾರೆ.
ಗಂಗಾ ನದಿಯನ್ನು ಮಲಿನಗೊಳಿಸುವ ಕೈಗಾರಿಕಾ ಘಟಕಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ಆದೇಶಿಸಿದ್ದಾರೆ.
ಜತೆಗೆ, ನದಿ ತೀರದಲ್ಲಿ ಪರಿಸರ ಸ್ನೇಹಿ ಚಿತಾಗಾರ ಸ್ಥಾಪಿಸುವಂತೆಯೂ ಸೂಚಿಸಿದ್ದಾರೆ. ದೆಹಲಿಯಲ್ಲಿ ಮಂಗಳವಾರ ಗಂಗಾ ಶುದ್ದೀಕರಣ ಸಭೆಯಲ್ಲಿ ಮಾತನಾಡಿದ ಅವರು, ನಗರ ತ್ಯಾಜ್ಯ, ಕೈಗಾರಿಕಾ ಕಶ್ಮಲಗಳ ಬಗ್ಗೆ ನಿಗಾ ವಹಿಸಬೇಕಾಗಿದೆ ಎಂದಿದ್ದಾರೆ.
Advertisement