
ಇಸ್ತಾನ್‌ಬುಲ್: ಮಹಿಳಾ ಆತ್ಮಹತ್ಯಾ ಬಾಂಬರ್ ದಾಳಿಗೆ ಓರ್ವ ಭದ್ರತಾ ಪೊಲೀಸ್ ಸಾವನ್ನಪ್ಪಿದ್ದು, ಮತ್ತೋರ್ವ ಸಿಬ್ಬಂದಿ ಗಾಯಗೊಂಡಿರುವ ಘಟನೆ ಟರ್ಕಿ ನಗರದಲ್ಲಿ ನಡೆದಿದೆ.
ಬ್ಲೂ ಮಸೀದಿ, ಸೋಫಿಯಾ ಮ್ಯೂಸಿಯಂ ಹಾಗೂ ಇನ್ನಿತರೆ ಪ್ರವಾಸಿ ತಾಣಗಳ ಮಧ್ಯೆ ಇದ್ದ ಪೊಲೀಸ್ ಠಾಣೆಗೆ ಬಂದ ಅನಾಮಿಕ ಮಹಿಳೆಯೊಬ್ಬಳು ತನ್ನ ಪರ್ಸ್ ಕಳೆದುಹೋಗಿದೆ ಎಂದು ಹೇಳಿದ್ದಾಳೆ. ನಂತರ ಇದ್ದಕ್ಕಿದ್ದಂತೆ ತನ್ನ ಬಳಿ ಇದ್ದ ಸೂಸೈಡ್ ಬಾಂಬ್‌ನ್ನು ಸ್ಫೋಟಿಸಿದ್ದಾಳೆ. ಈ ವೇಳೆ ಪೊಲೀಸ್ ಅಧಿಕಾರಿಯೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೊಬ್ಬ ಅಧಿಕಾರಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ದಾಳಿ ವೇಳೆ ಗಾಯಗೊಂಡಿದ್ದ ಅಧಿಕಾರಿಯೊಬ್ಬರನ್ನು ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ದಾಳಿ ಕುರಿತಂತೆ ಈ ವರೆಗೂ ಯಾವುದೇ ಭಯೋತ್ಪಾದಕ ಸಂಘಟನೆಗಳು ಹೊಣೆಯನ್ನು ಹೊತ್ತುಕೊಂಡಿಲ್ಲ.
Advertisement