60 ವರ್ಷಗಳಿಂದ ಜಳಕ ಮಾಡದ ಭೂಪ!

ಕೊಳೆತ ಮಾಂಸಗಳೆಂದರೆ ಪಂಚಪ್ರಾಣ, ಗುಂಡಿಯೇ ಈತನ ಅರಮನೆ...
ಕೊಳೆತ ಪ್ರಾಣಿಗಳ ಮಾಂಸವೆ ಈತನ ನಿತ್ಯ ಆಹಾರ
ಕೊಳೆತ ಪ್ರಾಣಿಗಳ ಮಾಂಸವೆ ಈತನ ನಿತ್ಯ ಆಹಾರ
Updated on

ದಕ್ಷಿಣ ಇರಾನ್: ಉತ್ತಮ ಆರೋಗ್ಯಕ್ಕೆ ಪ್ರತಿನಿತ್ಯ ಸ್ನಾನ ಮಾಡುವುದು ಅತ್ಯಗತ್ಯ. ದೈಹಿಕ ಶುಚಿತ್ವಕ್ಕೆ ನಿತ್ಯ ಸ್ನಾನ ಮಾಡುವುದು ನಮ್ಮ ನಿತ್ಯಕರ್ಮದಲ್ಲೊಂದು. ಆದರೆ ಇಲ್ಲೊಬ್ಬ ಭೂಪ ಬರೋಬ್ಬರಿ 60 ವರ್ಷಗಳಿಂದ ಸ್ನಾನ ಮಾಡಿಲ್ಲ ಅಂತ ಹೇಳಿದ್ರೆ ನಂಬ್ತಿರಾ.

ಹೌದು, ನೀವು ನಂಬಲೇಬೇಕು. ಈ ವೃದ್ಧನ ಹೆಸರು ಅಮೊ ಹಜಿ, ಈತನ ವಯಸ್ಸು 80 ವರ್ಷ. ಮೂಲತಃ ದಕ್ಷಿಣ ಇರಾನ್ನ ಹೋಲ್ ಎಂಬ ಗ್ರಾಮದ ನಿವಾಸಿ. ಒಂಟಿ ಜೀವಿಯಾಗಿರುವ ಅಮೊನನ್ನು ನೀವು ಭೇಟಿಯಾಗಬೇಕೆಂದರೆ, ಇವನಲ್ಲಿ ಅಂಟಿಕೊಂಡಿರುವ ದುರ್ವಾಸನೆಯನ್ನು ನೀವು ಸಹಿಸಿಕೊಳ್ಳಲೇಬೇಕು.

ಈ ಗ್ರಾಮದ ನಿವಾಸಿಗಳು ಈತನಿಗೆ ಸ್ನಾನ ಮಾಡಿಸಲು ಹಲವು ವರ್ಷಗಳಿಂದ ಭಗೀರಥ ಪ್ರಯತ್ನ ನಡೆಸಿದ್ದರೂ, ಸೋತು ಸುಣ್ಣವಾಗಿದ್ದಾರೆ. ಈತನಿಗೆ ಸ್ನಾನ ಎಂದರೆ ಅದೇನೋ ಭಯವಂತೆ, ಸ್ನಾನ ಮಾಡಿಸಿತ್ತಾರೆಂದು ತಿಳಿದರೆ ಸಾಕು, ಯಾರ ಕೈಗೂ ಸಿಗೋದಿಲ್ಲ ಈ ಭೂಪ.

ಅಮೊ ಹಜಿಗೆ ಕುಳಿತುಕೊಂಡು ಧೂಮಪಾನ ಮಾಡುವುದು ಎಂದರೆ ತುಂಬಾ ಇಷ್ಟವೆಂದು ಹೇಳುತ್ತಾರೆ ಗ್ರಾಮಸ್ಥರು.

ಈತನ ನಿದ್ರಾ ಸ್ಥಿತಿಯಂತೂ ಮತಷ್ಟು ಅಚ್ಚರಿ ಮೂಡಿಸುತ್ತದೆ. ಈತನಿಗಾಗಿ ನೆರೆಹೊರೆಯವರೇ ಒಂದು ಮನೆಕಟ್ಟಿಕೊಟ್ಟಿದ್ದರೂ ಸಹಾ, ಈತ ಮನೆಯಲ್ಲಿ ಮಲಗುವುದಿಲ್ಲ. ಗ್ರಾಮದಲ್ಲಿರುವ ಗುಂಡಿಯೇ ಈತನ ಅರಮನೆ. ಪ್ರತಿ ದಿನ ರಾತ್ರಿ ಆ ಗುಂಡಿಯಲ್ಲಿ ಶವದ ರೀತಿಯಲ್ಲಿ ನಿದ್ರೆ ಮಾಡಿ, ಕನಸು ಕಾಣುತ್ತಾನೆ.

ಹಜಿಯ ಊಟ ವ್ಯವಸ್ಥೆ ಮತ್ತಷ್ಟು ರೋಚಕ ಮೂಡಿಸುತ್ತದೆ. ಸತ್ತ ಪ್ರಾಣಿಗಳ ಮಾಂಸವೆ ಈತನ ನಿತ್ಯ ಆಹಾರ. ಗ್ರಾಮಗಳಲ್ಲಿ ಸತ್ತು ಬಿದ್ದಿರುವ ಪ್ರಾಣಿಗಳ ಆಹಾರಕ್ಕಾಗಿ ಶೋಧಮಾಡಿ, ಸೇವಿಸುತ್ತಾನೆ. ಇನ್ನು ಕೊಳೆತ ಮುಳ್ಳುಹಂದಿ ಎಂದರೆ ಈತನಿಗೆ ಪಂಚಪ್ರಾಣ ಎನ್ನುತ್ತಾರೆ ಸ್ಥಳೀಯರು.

ಹಲವು ವರ್ಷಗಳಿಂದ ಒಂದೇ ರಗ್ಗು ಧರಿಸಿದ್ದು, ಬೇಸಿಗೆ, ಮಳೆಗಾಲ ಹಾಗೂ ಚಳಿಗಾಲದ ಉಡುಪು ಎಲ್ಲವೂ ಇದೆ. ಈತನ ಹೇರ್ ಸೈಲ್ ಮಾಡಿಕೊಳ್ಳುವ ರೀತಿ ಕೇಳಿದರೆ ಬೆಚ್ಚಿ ಬೀಳ್ತೀರಾ. ಹಜಿ, ಹೇರ್ ಕಟ್ ಮಾಡಿಸಿಕೊಳ್ಳಲು, ಸಲೂನ್ಗೆ ಹೋಗುವುದಿಲ್ಲ.

ಅಗತ್ಯಕ್ಕಿಂತ ಹೆಚ್ಚು ಬೆಳೆದಿರುವ ತಲೆ ಹಾಗೂ ಗಡ್ಡದ ಕೂದಲು ಕತ್ತರಿಸಲು ಕತ್ತರಿ ಬಳಸುವುದಿಲ್ಲ. ಆತ ಬಳಸುವುದು ಬೆಂಕಿ ಕಡ್ಡಿ. ಬೆಂಕಿ ಹಚ್ಚಿ ಅಗತ್ಯಕ್ಕಿಂತ ಹೆಚ್ಚಿರುವ ಕೂದಲನ್ನು ತೆಗೆಯುತ್ತಾನೆ.

ಹಜಿಯ ಈ ಜೀವನ ಶೈಲಿಯ ಹಿಂದೆ ಒಂದು ಕಥೆಯಿದೆ. ಈತ ತನ್ನ ಯವ್ವೌವಾಸ್ಥೆಯಲ್ಲಿಯೇ ಕಾರಣಾಂತರಗಳಿಂದ ಮನೆಬಿಟ್ಟು ಈ ಊರಿಗೆ ಬಂದು ಸೇರಿಕೊಂಡನು. ಅಂದಿನಿಂದ ಇಲ್ಲಿಯವರೆಗೆ ಹಜಿ ಒಂಟಿ ಜೀವಿಯಾಗಿ ಕಾಲ ಕಳೆಯುತ್ತಿದ್ದಾನೆ.





Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com