ಉಡುಪಿ ಉಷ್ಣ ವಿದ್ಯುತ್ ಸ್ಥಾವರ ಡೀಲ್ ಸಂಕಷ್ಟದಲ್ಲಿ!

ಲ್ಯಾನ್ಕೋ ಇನ್ಫ್ರಾಟೆಕ್ ಜತೆಗಿನ ಅದಾನಿ ಕಂಪನಿ ಡೀಲ್ ಈಗ ಅತಂತ್ರ ಸ್ಥಿತಿಗೆ ತಲುಪಿದೆ...
ಲ್ಯಾನ್ಕೋ- ಅದಾನಿ ಕಂಪನಿ ಅತಂತ್ರ
ಲ್ಯಾನ್ಕೋ- ಅದಾನಿ ಕಂಪನಿ ಅತಂತ್ರ

ಮುಂಬೈ: ಉಡುಪಿಯ 1.200 ಮೆ.ವ್ಯಾ. ಸಾಮರ್ಥ್ಯದ ಉಷ್ಣವಿದ್ಯುತ್ ಸ್ಥಾವರ ಖರೀದಿಸುವ ಲ್ಯಾನ್ಕೋ ಇನ್ಫ್ರಾಟೆಕ್ ಜತೆಗಿನ ಅದಾನಿ ಕಂಪನಿ ಡೀಲ್ ಈಗ ಅತಂತ್ರ ಸ್ಥಿತಿಗೆ ತಲುಪಿದೆ. ಹೀಗೆಂದು ರಾಷ್ಟ್ರೀಯ ಪತ್ರಿಕೆಯೊಂದು ವರದಿ ಮಾಡಿದೆ.

ಈ ಒಪ್ಪಂದಕ್ಕೆ ಸಂಬಂಧಿಸಿದ ಅಂತಿಮ ಪ್ರಕ್ರಿಯೆಗಳು ಡಿ.29ಕ್ಕೆ ಮುಕ್ತಾಯಗೊಳ್ಳಬೇಕಿತ್ತು. ಆದರೆ, ಎರಡೂ ಕಂಪನಿಗಳು ಈ ಗಡುವಿನೊಳಗೆ ಅಂತಿಮ ನಿರ್ಧಾರಕ್ಕೆ ಬರುವಲ್ಲಿ ವಿಫಲವಾಗಿವೆ.

ಇದರಿಂದಾಗಿ ಉಡುಪಿ ಉಷ್ಣವಿದ್ಯುತ್ ಸ್ಥಾವರವನ್ನು ಖರೀದಿಸಲು ಆಸಕ್ತಿ ತೋರಿದ್ದ ಇತರೆ ಕಂಪನಿಗಳಿಗೆ ಮತ್ತೊಂದು ಅವಕಾಶ ಸಿಗುವ ಸಾಧ್ಯತೆ ಸಿಕ್ಕರೂ ಸಿಗಬಹುದು ಎನ್ನುಂತಾಗಿದೆ. ಜೆಎಸ್‌ಡಬ್ಲ್ಯು ಎನರ್ಜಿ ಮತ್ತು ಟಾಟಾ ಪವರ್-ಐಸಿಐಸಿಐ ಈ ಸ್ಥಾವರ ಖರೀದಿಗೆ ಮೊದಲು ಆಸಕ್ತಿ ತೋರಿದ್ದವು.

ಈ ಕಂಪನಿಗಳನ್ನು ಹಿಂದಿಕ್ಕಿ ಆದಾನಿ ಡೀಲ್ ಕುದುರಿಸಿಕೊಳ್ಳಲು ಮುಂದಾಗಿತ್ತು. ಈಗ ಒಪ್ಪಂದಕ್ಕೆ ಸಂಬಂಧಿಸಿದ ಗಡುವು ಮುಗಿದಿರುವುದರಿಂದ ಎರಡೂ ಕಂಪನಿಗಳು ದೆಹಲಿ ಹೈಕೋರ್ಟ್ ಮೊರೆ ಹೋಗಿವೆ.

ಡೀಲ್‌ಗೆ ಸಂಬಂಧಿಸಿದ ಗಡುವನ್ನು ವಿಸ್ತರಿಸಲು ಮನವಿ ಮಾಡಿವೆ. ಈ ಡೀಲ್‌ನಿಂದ ಅದಾನಿ ಹೊರನಡೆದರೂ ಲ್ಯಾನ್ಕೋ ಸಂಕಷ್ಟಕ್ಕೆ ಸಿಲುಕಲಿದೆ. ಯಾಕೆಂದರೆ ಅದಾನಿ ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ಲ್ಯಾನ್ಕೋಗೆ ರೂ.125 ಕೋಟಿ ಹಿಂತಿರುಗಿಸದೆ ಮೂರನೇ ಕಂಪನಿಯೊಂದಿಗೆ ಮಾತುಕತೆ ನಡೆಸಲು ಆಗದ ಪರಿಸ್ಥಿತಿಯಲ್ಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com