
ನವದೆಹಲಿ: ಸಾಕ್ಷಿ ಮಹಾರಾಜ್ ನೀಡುತ್ತಿರುವ ಹೇಳಿಕೆ ಅವರ ವೈಯಕ್ತಿಕವಾದದ್ದೇ ಹೊರತು ಬಿಜೆಪಿಗೂ ಹೇಳಿಕೆ ಸಂಸದರ ವೈಯಕ್ತಿಕ ಹೇಳಿಕೆಗೂ ಯಾವುದೇ ಸಂಬಂಧವಿಲ್ಲ ಎಂದು ಗುರುವಾರ ಬಿಜೆಪಿ ಸ್ಪಷ್ಟಪಡಿಸಿದೆ.
ಮೀರತ್‌ನಲ್ಲಿ ನಿನ್ನೆ ನಡೆದ ಎರಡನೇ ಸಂತ ಸಮಾಗಮ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಅವರು, 'ಹಿಂದೂ ಮಹಿಳೆಯರು ಕನಿಷ್ಟ ಪಕ್ಷ ನಾಲ್ಕು ಮಕ್ಕಳನ್ನಾದರು ಹೆರಬೇಕು, ಒಂದು ಮಗುವನ್ನು ನಮಗೆ ನೀಡಿ, ಮತ್ತೊಂದು ಮಗುವನ್ನು ದೇಶದ ಗಡಿ ರಕ್ಷಣೆಗೆ ನೀಡಬೇಕು' ಎಂಬ ಹೇಳಿಕೆ ನೀಡಿ ವಿವಾದವೊಂದನ್ನು ಸೃಷ್ಟಿಸಿದ್ದರು.
ಈ ಹೇಳಿಕೆಗೆ ದೇಶಾದಾದ್ಯಂತ ಭಾರಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಬಿಜೆಪಿ ವಕ್ತಾರ ಜಿವಿಎಲ್ ನರಸಿಂಹ ರಾವ್ ಅವರು, ಸಾಕ್ಷಿ ಮಹಾರಾಜ್ ಹೇಳಿಕೆ ನೀಡುತ್ತಿರುವುದು ಅವರ ವೈಯಕ್ತಿಕವಾದದ್ದು, ಇದು ಪಕ್ಷದ ಅಥವಾ ಭಾರತ ಸರ್ಕಾರದ ಹೇಳಿಕೆಯಲ್ಲ. ಈ ರೀತಿಯಾಗಿ ಪಕ್ಷ ಎಂದಿಗೂ ಚಿಂತನೆ ನಡೆಸಿಲ್ಲದಿರುವುದರಿಂದ ಪಕ್ಷದ ಸಂಸದರು ನೀಡುವ ವೈಯಕ್ತಿಕ ಹೇಳಿಕೆಗಳಿಗೆ ಪಕ್ಷ ಜವಾಬ್ದಾರಿಯಲ್ಲ ಎಂದು ಹೇಳಿದ್ದಾರೆ.
Advertisement