ಲಂಡನ್‌ನಲ್ಲಿರುವ ಅಂಬೇಡ್ಕರ್ ಮನೆ ಖರೀದಿಸಲು ಭಾರತ ನಿರುತ್ಸಾಹ

ಬಿ. ಆರ್ ಅಂಬೇಡ್ಕರ್ ಲಂಡನ್‌ ಮನೆ
ಬಿ. ಆರ್ ಅಂಬೇಡ್ಕರ್ ಲಂಡನ್‌ ಮನೆ

ನವದೆಹಲಿ: ಭಾರತದ ಸಂವಿಧಾನ ಶಿಲ್ಪಿ ಡಾ.ಬಿ. ಆರ್ ಅಂಬೇಡ್ಕರ್​ ಅವರ ಲಂಡನ್‌ನಲ್ಲಿರುವ ಮನೆಯನ್ನು ಕೊಳ್ಳಲು ಭಾರತ ಸರ್ಕಾರ ನಿರಾಸಕ್ತಿ ತೋರಿದೆ.

2050 ಸ್ಕೈರ್​ ಪೀಟ್​ನ ಮೂರು ಅಂತಸ್ತಿನ ಮನೆ ಮಾರಾಟಕ್ಕಿದ್ದು, ಭಾರತ ಸರ್ಕಾರವೇ ಕೊಂಡುಕೊಳ್ಳುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಈ ಬಗ್ಗೆ ಭಾರತ ಸರ್ಕಾರ ಆಸಕ್ತಿಯೇ ತೋರಿಲ್ಲ. ಇದರಿಂದ ಸಂಸ್ಥೆ  ಬೇಸತ್ತು ಬೇರೆ ಗ್ರಾಹಕರನ್ನು ಹುಡುಕುತ್ತಿರುವುದಾಗಿ ಏಜೆಂಟ್​‘ಗಳು ತಿಳಿಸಿದ್ದಾರೆ.

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್​ ಅಂಬೇಡ್ಕರ್​ ಅವರ ಲಂಡನ್​ ಮನೆಯನ್ನು ಕೊಳ್ಳಲು ತಮ್ಮ ಸರ್ಕಾರ ಹೊಸ ಪ್ರಸ್ತಾವನೆಯನ್ನು ಕಳುಹಿಸಿದೆ ಎಂದು ಹೇಳಿದ್ದರು. ಆದರೆ, ಇದನ್ನು ಮನೆ ಮಾರಾಟ ಮಾಡುತ್ತಿರುವ ಸಂಸ್ಥೆ ತಳ್ಳಿ ಹಾಕಿದೆ. ಮನೆಯನ್ನು ಕೊಳ್ಳಲು ಭಾರತದಿಂದ ಯಾವುದೇ ಪ್ರಸ್ತಾವನೆ ಬಂದಿಲ್ಲ ಎಂದು ತಿಳಿಸಿದ್ದಾರೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com