11ನೇ ಬಾರಿ ಡಿಎಂಕೆ ಅಧ್ಯಕ್ಷರಾಗಿ ಕರುಣಾನಿಧಿ ಆಯ್ಕೆ

ಎಂ.ಕರುಣಾನಿಧಿ ಪುತ್ರಿ ಕನಿಮೋಳಿ, ಡಿಎಂಕೆ ಮಹಿಳಾ ವಿಭಾಗದ ಅಧ್ಯಕ್ಷೆ...
ಡಿಎಂಕೆ ಅಧ್ಯಕ್ಷರಾಗಿ ಎಂ. ಕರುಣಾನಿಧಿ ಆಯ್ಕೆ
ಡಿಎಂಕೆ ಅಧ್ಯಕ್ಷರಾಗಿ ಎಂ. ಕರುಣಾನಿಧಿ ಆಯ್ಕೆ

ಚೆನ್ನೈ: ದ್ರಾವಿಡ ಮುನ್ನೇಟ್ರ ಕಳಗಂ ಪಕ್ಷದ ಅಧ್ಯಕ್ಷರಾಗಿ ಎಂ.ಕರುಣಾನಿಧಿ 11ನೇ ಬಾರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಅಂತೆಯೇ ಡಿಎಂಕೆ ಕಾರ್ಯದರ್ಶಿಯಾಗಿ ಹಿರಿಯ ಪುತ್ರ ಕೆ.ಅನ್ಬಳಗನ್, ಖಜಾಂಚಿಯಾಗಿ ಎಂ.ಕೆ.ಸ್ಟಾಲೀನ್ ಪುನಃ ಆಯ್ಕೆಯಾಗಿದ್ದಾರೆ.

ಡಿಎಂಕೆ ಪಕ್ಷದ 14ನೇ ಆಂತರಿಕ ಚುನಾವಣೆ ನಡೆದಿದ್ದು, 65 ಜಿಲ್ಲೆಗಳಲ್ಲಿ, 60 ಜಿಲ್ಲೆಗಳ ಕಾರ್ಯದರ್ಶಿ ಹಾಗೂ ನಿರ್ವಾಹಕರನ್ನು ಆಯ್ಕೆ ಮಾಡಲಾಯಿತು.

ಎಂ.ಕರುಣಾನಿಧಿ ಪುತ್ರಿ ಕನಿಮೋಳಿ, ಡಿಎಂಕೆ ಮಹಿಳಾ ವಿಭಾಗದ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.

ಮಾಜಿ ಸಚಿವ ಹಾಗೂ ಡಿಎಂಕೆ ನಾಯಕ ಎಸ್.ದುರೈಸ್ವಾಮಿ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಈ ಹಿಂದೆ ಹಿರಿಯ ನಾಯಕ ಆರ್ಕಾಡ್ ಎನ್.ವೀರಸ್ವಾಮಿ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸಿದ್ದರು.

ಇನ್ನು ಉಪಕಾರ್ಯದರ್ಶಿಗಳಾಗಿ ಸರ್‌ಗುಣ ಪಂಡಿತ್, ವಿ.ಪಿ.ದುರೈಸ್ವಾಮಿ, ಐ.ಪೆರಿಯಸ್ವಾಮಿ, ಸುಬ್ಬಲಕ್ಷ್ಮಿ ಜಗದೀಶ್ ಸ್ಥಾನ ಪಡೆದುಕೊಂಡಿದ್ದಾರೆ.

ಅಂತೆಯೇ ತಿರುಚ್ಚಿಯ ಎನ್.ಶಿವಾ ಮತ್ತು ಮಾಜಿ ಸಚಿವ ಎ.ರಾಜ ಅವರನ್ನು ಪಕ್ಷದ ಪ್ರಚಾರ ಕಾರ್ಯದರ್ಶಿಗಳಾಗಿ ಡಿಎಂಕೆ ಘೋಷಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com