ಪ್ಯಾರಿಸ್ ಶೂಟೌಟ್: ದಾಳಿಯ ಹೊಣೆ ಹೊತ್ತ ಅಲ್ ಖೈದಾ

ಪ್ಯಾರಿಸ್ ಶೂಟೌಟ್: ದಾಳಿಯ ಹೊಣೆ ಹೊತ್ತ ಅಲ್ ಖೈದಾ

ಪ್ಯಾರಿಸ್: 12 ಮಂದಿನ್ನು ಬಲಿ ಪಡೆದ ಚಾರ್ಲಿ ಹೆಬ್ಡೋ ಪತ್ರಿಕೆ ಕಚೇರಿ ಮೇಲಿನ ದಾಳಿಯ ಹೊಣೆ ಹೊತ್ತುಕೊಂಡಿರುವ ಅಲ್ ಖೈದಾ ಉಗ್ರ ಸಂಘಟನೆ, ಫ್ರಾನ್ಸ್‌ನಲ್ಲಿ ಮತ್ತಷ್ಟು ದಾಳಿ ನಡೆಸುವ ಎಚ್ಚರಿಕೆ ನೀಡಿದೆ.

ಫ್ರಾನ್ಸ್ ಸೇನೆ ಚಾರ್ಲಿ ಹೆಬ್ಡೋ ಪತ್ರಿಕೆ ಮೇಲೆ ದಾಳಿ ಮಾಡಿದ್ದ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಮಾರನೆ ದಿನವೇ ಅಲ್ ಖೈದಾ ಸಂಘಟನೆ ಯೆಮನ್‌ನಲ್ಲಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ, ದಾಳಿಯ ಹೊಣೆ ಹೊತ್ತುಕೊಂಡಿದೆ ಎಂದು ಶನಿವಾರ ವರದಿ ಮಾಡಲಾಗಿದೆ.

ಅಸೋಸಿಯೇಟೆಡ್ ಪ್ರೆಸ್‌ಗೆ ನೀಡಲಾದ ಪ್ರಕಟಣೆಯಲ್ಲಿ, ನಮ್ಮ ನಾಯಕರ ಸೂಚನೆಯಂತೆ ಚಾರ್ಲಿ ಹೆಬ್ಡೋ ಪತ್ರಿಕೆ ಮೇಲೆ ದಾಳಿ ಮಾಡಲಾಗಿದೆ ಎಂದು ಅಲ್ ಖೈದಾ ಸದಸ್ಯರು ಹೇಳಿಕೊಂಡಿದ್ದಾರೆ. ಅಲ್ಲದೆ ಈ ದಾಳಿ ಪ್ರವಾದಿ ಮೊಹಮದ್ ಅವರಿಗೆ ಅಗೌರವ ತೊರಿದವರ ವಿರುದ್ಧದ ಪ್ರತಿಕಾರ ಎಂದು ಹೇಳಲಾಗಿದೆ.

ಇಸಿಸ್ ಮುಖ್ಯಸ್ಥನ ಕುರಿತಂತೆ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ವ್ಯಂಗ್ಯಚಿತ್ರವನ್ನು ವಿರೋಧಿಸಿ ಪ್ಯಾರಿಸ್‌ನ ಪ್ರಮುಖ ವಾರ ಪತ್ರಿಕೆ 'ಚಾರ್ಲಿ ಹೆಬ್ಡೋ' ಮೇಲೆ ಇಬ್ಬರು ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಘಟನೆಯಲ್ಲಿ ಪತ್ರಿಕೆಯ ಮುಖ್ಯ ಸಂಪಾದಕ, 4 ಪ್ರಮುಖ ಕಾರ್ಟೂನಿಸ್ಟ್‌ಗಳು, ಕಚೇರಿಯ ಭದ್ರತಾ ಸಿಬ್ಬಂದಿ ಮತ್ತು ಇಬ್ಬರು ಪೊಲೀಸರು ಸೇರಿದಂತೆ ಒಟ್ಟು 12 ಮಂದಿ ದಾರುಣವಾಗಿ ಸಾವನ್ನಪ್ಪಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com