
ಲಾಹೋರ್: ಕಳೆದ ವರ್ಷ ವಾಘಾ ಗಡಿಯಲ್ಲಿ ಸಂಭವಿಸಿದ ಆತ್ಮಾಹುತಿ ಬಾಂಬ್ ಸ್ಫೋಟದ ರೂವಾರಿ ರೂವುಲ್ಲಾ ಅಲಿಯಾಸ್ ಅಸಾದುಲ್ಲ, ಪಾಕಿಸ್ತಾನ ನಡೆಸಿದ ದಾಳಿಗೆ ಬಲಿಯಾಗಿದ್ದಾರೆ. ತೆಹ್ರಿಕ್-ಇ-ತಾಲಿಬಾನಿ ಸಂಘಟನೆ ನಾಯಕ ಎಂದು ತಿಳಿದುಬಂದಿದೆ. ದಾಳಿಯಲ್ಲಿ ಮತ್ತಿಬ್ಬ ಉಗ್ರರೂ ಹತ್ಯೆಯಾಗಿರುವುದಾಗಿ ಪಾಕಿಸ್ತಾನ ಖಚಿತಪಡಿಸಿದೆ.
ಕಳೆದ ವರ್ಷ ವಾಘಾ ಗಡಿಯಲ್ಲಿ ಇಂಡೋ-ಪಾಕ್ ಧ್ವಜಾಅವರೋಹಣ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮ ವೀಕ್ಷಿಸಲು ಭಾರತ ಹಾಗೂ ಪಾಕಿಸ್ತಾನದ ನೂರಾರು ಮಂದಿ ಪ್ರಜೆಗಳು ನೆರೆದಿದ್ದರು.
ಆ ವೇಳೆ ಉಘ್ರ ಸಂಘಟನೆ ಆತ್ಮಾಹುತಿ ಬಾಂಬ್ ಸ್ಫೋಟ ನಡೆಸಿ ದುಷ್ಕೃತ್ಯ ಎಸಗಿತ್ತು. ಈ ದುರಂತದಲ್ಲಿ 61 ಮಂದಿ ಅಮಾಯಕರು ಬಲಿಯಾಗಿದ್ದು, ನೂರಾರು ಮಂದಿ ಗಾಯಗೊಂಡಿದ್ದರು. ಈ ಸ್ಫೋಟದ ರೂವಾರಿ ಅಸಾದುಲ್ಲಾ ಪಾಕಿಸ್ತಾನದ ದಾಳಿಗೆ ಬಲಿಯಾಗಿದ್ದಾನೆ.
ಪಾಕಿಸ್ತಾನ ಸೇನಾ ಪಡೆ ಹಲವು ದಿನಗಳಿಂದ ಅಸಾದುಲ್ಲನಿಗಾಗಿ ತೀವ್ರ ಶೋಧ ನಡೆಸಿತ್ತು. ಇಂದು ಲಾಹೋರ್‌ನಲ್ಲಿ ತೆಹ್ರಿಕ್-ಇ-ತಾಲಿಬಾನಿ ಸಂಘಟನೆ ಉಗ್ರರು ಅಡಗಿರುವ ಮಾಹಿತಿ ಪಡೆದ ಲಾಹೋರ್ ಪೊಲೀಸರು ದಾಳಿ ನಡೆಸಿದರು.
ಪೊಲೀಸರ ವಿರದ್ಧ ದಾಳಿ ನಡೆಸಲು ಉಗ್ರರು ಮುಂದಾಗುತ್ತಿದ್ದಂತೆ, ಪ್ರತಿ ದಾಳಿ ನಡೆಸಿದ ಪೊಲೀಸರು ಅಸಾದುಲ್ಲನನ್ನು ಗುಂಡಿಟ್ಟು ಹತ್ಯೆ ನಡೆಸಿದರು. ಈ ವೇಳೆ ಮತ್ತಿಬ್ಬರ ಉಗ್ರರೂ ಸಹಾ ಸಾವನ್ನಪಿದ್ದಾರೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ.
Advertisement