
ನವದೆಹಲಿ: ದೇಶ ವಿರೋಧಿ ಕೆಲಸ ಮಾಡುತ್ತಿರುವ ಆರೋಪ ಎದುರಿಸುತ್ತಿರುವ ಗ್ರೀನ್‌ಪೀಸ್ ಇಂಡಿಯಾ ಎನ್‌ಜಿಒದ ಸದಸ್ಯೆಗೆ ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಧಿಕಾರಿಗಳು ವಿದೇಶಕ್ಕೆ ತೆರಳದಂತೆ ಅಡ್ಡಿ ಮಾಡಿದ್ದಾರೆ.
ಕೇಂದ್ರ ಸರ್ಕಾರದ ಆದೇಶದ ಮೇರೆಗೆ ಈ ರೀತಿ ಮಾಡುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಗ್ರೀನ್‌ಪೀಸ್‌ನ ಹಿರಿಯ ಪ್ರಚಾರಕಿ ಪ್ರಿಯಾ ಪಿಲ್ಲೈ ಲಂಡನ್‌ಗೆ ತೆರಳಲು ದೆಹಲಿ ವಿಮಾನ ನಿಲ್ದಾಣಕ್ಕೆ ತೆರಳಿದ್ದರು.
ಆದರೆ, ಅವರ ವೀಸಾ ತಪಾಸಣೆ ನಡೆಸಿದ ಅಧಿಕಾರಿಗಳು ಪ್ರಯಾಣಕ್ಕೆ ಅವಕಾಶ ನೀಡಲಿಲ್ಲ. ಇದರಿಂದ ಕುಪಿತಗೊಂಡ ಪ್ರಿಯಾ, ವೀಸಾ ಅವಧಿ ಇದ್ದರೂ ಹೀಗೆ ಏಕೆ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಆಗ ಗ್ರೀನ್‌ಪೀಸ್ ಇಂಡಿಯಾದ ಯಾವೊಬ್ಬರೂ ಭಾರತ ಬಿಟ್ಟು ತೆರಳಲು ಅವಕಾಶ ನೀಡಬಾರದು ಎಂದು ಕೇಂದ್ರ ಆದೇಶ ಹೊರಡಿಸಿದೆ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
Advertisement