
ಭಿಲ್ವಾರಾ: ಹಿಂದೂ ಮಹಿಳೆಯರು ಕನಿಷ್ಠ 4 ಮಕ್ಕಳಿಗೆ ಜನ್ಮ ನೀಡಬೇಕು ಎಂದು ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಕರೆ ನೀಡಿದ ಬೆನ್ನಲ್ಲೇ ವಿಶ್ವ ಹಿಂದೂ ಪರಿಷತ್‌ನ ನಾಯಕರೊಬ್ಬರು 'ನಾವಿಬ್ಬರು, ನಮಗೆ ನಾಲ್ವರು' ಎಂಬ ಕಾನೂನು ಜಾರಿಯಾಗಬೇಕು ಎಂದು ಆಗ್ರಹಿಸಿದ್ದಾರೆ.
ಭಿಲ್ವಾರಾದಲ್ಲಿ ಭಾನುವಾರ ವಿಎಚ್‌ಪಿ ಹಮ್ಮಕೊಂಡಿದ್ದ ವಿರಾಟ್ ಹಿಂದೂ ಸಮಾಜೋತ್ಸವದಲ್ಲಿ ಮಾತನಾಡಿದ ಸಾಧ್ವಿ ಪ್ರಾಚಿ, ಹಿಂದೂ ರಾಷ್ಟ್ರದ ಕನಸು ನನಸಾಗಬೇಕೆಂದರೆ 'ನಾವಿಬ್ಬರು, ನಮಗೆ ನಾಲ್ವರು' (ಹಂ ದೋ, ಹಮಾರೆ ಚಾರ್) ಕಾನೂನು ಜಾರಿ ಮಾಡಬೇಕು. ಹಿಂದೂ ಮಹಿಳಗೆ ನಾಲ್ಕು ಮಕ್ಕಳಿದ್ದರೆ, ಒಬ್ಬ ಎಂಜಿನಿಯರ್ ಎರಡನೆಯ ಡಾಕ್ಟರ್, ಮೂರನೆಯವ ಗಡಿ ಕಾಯುವ ಯೋಧನಾಗುತ್ತಾನೆ. ಕೊನೆಯವ ಸಮಾಜ ಸೇವೆಗಾಗಿ ತನ್ನ ಜೀವನ ಮುಡಿಪಾಗಿಡುತ್ತಾನೆ. 'ಅವರ' (ಅಲ್ಪ ಸಂಖ್ಯಾತರ) ಜನ ಸಂಖ್ಯೆ ಹೆಚ್ಚುತ್ತಾ ಹೋಗುತ್ತಿದೆ, ನಮ್ಮದು ಕುಗ್ಗುತ್ತಿದೆ ಎಂದಿದ್ದಾರೆ.
ಕಾರ್ಯಕ್ರಮದಲ್ಲಿ ರಾಮ ಮಂದಿರ ನಿರ್ಮಾಣ, ಗೋಹತ್ಯೆ ನಿಷಏಧ, ಮತಾಂತರ ವಿರೋದಿ ಕಾನೂನಿನ ಬಗ್ಗೆ ಚರ್ಚಿಸಿದ ವಿಎಚ್‌ಪಿ ನಾಯಕರು ಇಡೀ ವಿಶ್ವವೇ ಹಿಂದೂ ಧರ್ಮಕ್ಕೆ ಮತಾಂತರಗೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಕರೆ ನೀಡಿದ್ದಾರೆ.
Advertisement