ಅಸರಾಂ ರೇಪ್ ಕೇಸ್‌ನ ಸಾಕ್ಷಿ ಹತ್ಯೆ: ಹಂತಕರ ಪತ್ತೆಗೆ ತಂಡ ರಚನೆ

ವಿವಾದಾತ್ಮಕ ದೇವಮಾನವ ಅಸರಾಂ ಬಾಪು...
ಅಸರಾಂ ಬಾಪು
ಅಸರಾಂ ಬಾಪು

ಮುಜಾಫರ್‌ನಗರ: ವಿವಾದಾತ್ಮಕ ದೇವಮಾನವ ಅಸರಾಂ ಬಾಪು ವಿರುದ್ಧದ ಅತ್ಯಾಚಾರ ಪ್ರಕರಣದ ತನಿಖೆಯಲ್ಲಿ ಪೊಲೀಸರಿಗೆ ಭಾರಿ ಹಿನ್ನೆಡೆಯಾಗಿದೆ. ಪ್ರಕರಣದ ಪ್ರಮುಖ ಸಾಕ್ಷಿಯನ್ನು ಅಪರಿಚಿತ ವ್ಯಕ್ತಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಸೋಮವಾರ ವರದಿ ಮಾಡಲಾಗಿದೆ.

ಉತ್ತರ ಪ್ರದೇಶದ ಮುಜಾಫರ್‌ನಗರದಲ್ಲಿ ಅಸರಾಂ ರೇಪ್ ಕೇಸ್‌ನ ಪ್ರಮುಖ ಸಾಕ್ಷಿಯಾಗಿದ್ದ 35 ವರ್ಷ ಅಖಿಲ್ ಗುಪ್ತಾ ತನ್ನ ಮನೆಗೆ ತೆರಳುತ್ತಿದ್ದ ವೇಳೆ ಅಪರಿಚಿತ ವ್ಯಕ್ತಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಗುಪ್ತಾ ಅವರು ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಜೈಲು ಪಾಲಾಗಿರುವ ಅಸರಾಂ ಬಾಪು ಆಶ್ರಮದಲ್ಲಿ ಅಡುಗೆ ಕೆಲಸದಾಳು ಮತ್ತು ಆಪ್ತ ಸಹಾಯಕನಾಗಿ ಕೆಲಸ ಮಾಡುತ್ತಿದ್ದರು. ಈ ಪ್ರಕರಣ ಸಂಬಂಧ ಗುಜರಾತ್ ಪೊಲೀಸರು ಗುಪ್ತಾ ಅವರಿಂದ ಹೇಳಿಕೆ ಪಡೆದಿದ್ದರು ಮತ್ತು ಅವರನ್ನು ಪ್ರಮುಖ ಸಾಕ್ಷಿ ಎಂದು ಸಹ ಪರಿಗಣಿಸಿದ್ದರು.

ಈ ಸಂಬಂಧ ಅಖಿಲ್ ಗುಪ್ತಾ ಸಂಬಂಧಿ ಆಶಿಶ್ ಗುಪ್ತ ಇಬ್ಬರು ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು, ಗುಪ್ತಾ ಹಂತಕರ ಪತ್ತೆಗಾಗಿ ನಗರ ಪೊಲೀಸ್ ವರಿಷ್ಠಾಧಿಕಾರಿ ಶ್ರವಣ್ ಕುಮಾರ್ ನೇತೃತ್ವದಲ್ಲಿ ಮೂರು ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಎಚ್.ಎನ್.ಸಿಂಗ್ ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com