
ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಇದೇ ಮೊದಲ ಬಾರಿಗೆ ಕುಸಿತ ಕಂಡಿದೆ. ಐದು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ತೈಲ ದರ ಪಾತಾಳಕ್ಕಿಳಿದಿದೆ.
ಜೂನ್‌ನಿಂದ ಈ ವರೆಗೆ ಪ್ರತಿ ಬ್ಯಾರೆಲ್ ತೈಲ ದರ ರು. 3100 (50 ಡಾಲರ್) ಕ್ಕಿಳಿದಿದೆ. 2009ರ ಆರ್ಥಿಕ ಹಿಂಜರಿತದ ಬಳಿಕ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಈ ಮಟ್ಟಿಗಿನ ಕುಸಿತ ಕಾಣುತ್ತಿರುವುದು ಇದೇ ಮೊದಲು. ತೈಲ ವ್ಯವಹಾರ ವಿಶ್ಲೇಷಕರ ಪ್ರಕಾಪ, ತೈಲದರ ರು.2500 (40 ಡಾಲರ್) ಗಿಂತಲೂ ಕೆಳಗೆ ಕುಸಿಯುವ ಸಾಧ್ಯತೆ ಇದೆ. ಕೆಲವು ವಿಶ್ಲೇಷಕರು ವರ್ಷಾಂತ್ಯದಲ್ಲಿ ಪ್ರತಿ ಬ್ಯಾರೆಲ್ ತೈಲ ದರ ರು 43 50 (70 ಡಾಲರ್) ಕ್ಕೇಳ ಲಿದೆ ಎಂದು ಆಶಾವಾದ ವ್ಯಕ್ತಪಡಿಸುತ್ತಾರೆ. ಆದರೆ, ತೈಲದರ ಅಷ್ಟರಮಟ್ಟಿಗೆ ಏರಿಕೆಯಾಗುವುದು ಅನುಮಾನಾಸ್ಪದ ಎಂದಿದ್ದಾರೆ ತಜ್ಞ ರು.
ಯಾಕೆ ಇಳಿಯಾಗುತ್ತಿದೆ?: ಈ ಪ್ರಶ್ನೆಗೆ ಉತ್ತರ ನೀಡುವುದು ಕಷ್ಟ. ಸದ್ಯದ ಸ್ಥಿತಿಯಲ್ಲಿ ಬೇಡಿಕೆ ಮತ್ತು ಪೂರೈಕೆಯಲ್ಲಿನ ವ್ಯತ್ಯಾಸವೇ ದರ ಇಳಿಕೆಗೆ ಮೂಲ ಕಾರಣ ಎನ್ನಲಾಗುತ್ತಿದೆ. ಇದಲ್ಲದೆ, ಯುರೋಪ್‌ನಲ್ಲಿ ಹೆಚ್ಚಿನ ಇಂಧನ ಕ್ಷಮತೆ ಹೊಂದಿರುವ ವಾಹನಗಳನ್ನು ಪರಿಚಯಿಸಲಾಗುತ್ತಿದೆ.
ತೈಲ ರಫ್ತು ಮಾಡುವ ದೇಶಗಳ ಸಂಘಟನೆ (ಒಪೆಕ್) ದರ ಏರಿಕೆಗೆ ಉತ್ಪಾದನೆ ಕಡಿತ ಮಾಡುತ್ತಿತ್ತು. ಆದರೆ ಸೌದಿ ಅರೇಬಿಯಾ, ಯುಎಇ ಮತ್ತು ಇತರೆ ಗಲ್ಫ್ ರಾಷ್ಟ್ರಗಳು ತೈಲ ಉತ್ಪಾದನೆ ಕಡಿತ ಮಾಡಲು ಹಿಂದೇಟು ಹಾಕುತ್ತಿವೆ. ಇದೇ ಅವಧಿಯಲ್ಲಿ ಇರಾಕ್ ನಲ್ಲೂ ಹೆಚ್ಚಿನ ಪ್ರಮಾಣದಲ್ಲಿ ತೈಲ ಉತ್ಪಾದಿಸಲಾಗುತ್ತಿದೆ. ಸೌದಿ ಅಧಿಕಾರಿಗಳ ಪ್ರಕಾರ, ಅವರು ಉತ್ಪಾದನೆ ಕಡಿತ ಮಾಡಿದರೆ ದರ ಏರಬಹುದು. ಆದರೆ ಮಾರಕಟ್ಟೆಯಲ್ಲಿ ದೇಶದ ಪಾಲು ಕಡಿತಗೊಂಡು ಪ್ರತಿಸ್ಪರ್ಧಿಗಳಿಗೆ ಲಾಭ ಆಗಬಹುದು ಎನ್ನುವುದು ಅಧಿಕಾರಿಗಳ ಅಭಿಪ್ರಾಯ.
Advertisement