ಜಮ್ಮು-ಕಾಶ್ಮೀರದಲ್ಲಿ ಐವರು ಉಗ್ರರ ಎನ್‌ಕೌಂಟರ್

ಎನ್‌ಕೌಂಟರ್(ಸಾಂದರ್ಭಿಕ ಚಿತ್ರ)
ಎನ್‌ಕೌಂಟರ್(ಸಾಂದರ್ಭಿಕ ಚಿತ್ರ)
Updated on

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಭಾರತೀಯ ಸೇನಾಪಡೆ ಐವರು ಉಗ್ರರನ್ನು ಗುರುವಾರ ಹೊಡೆದು ಉರುಳಿಸಿದ್ದಾರೆ.

ಕಾಶ್ಮೀರ ಕಣಿವೆಯ ದಕ್ಷಿಣ ಭಾಗದಲ್ಲಿರುವ ಶೋಪಿಯಾನ್ ಜಿಲ್ಲೆಯಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಭದ್ರತಾ ಪಡೆಗಳು ಉಗ್ರರನ್ನು ಎನ್‌ಕೌಂಟರ್‌ ಮಾಡಿದ್ದಾರೆ.

‘ಹಲವು ಗಂಟೆಗಳ ಕಾಲ ನಡೆದ ಎನ್‌ಕೌಂಟರ್ ಕಾರ್ಯಾಚರಣೆಯಲ್ಲಿ ಐವರು ಉಗ್ರರು ಹತರಾಗಿದ್ದಾರೆ’ ಎಂದು ಕಾಶ್ಮೀರ ಪೊಲೀಸ್ ಮಹಾ ನಿರ್ದೇಶಕ ಅಬ್ದುಲ್ ಗನಿ ಮೀರ್‌ ಅವರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಮೃತ ಉಗ್ರರು ಜೈಷ್‌ ಎ ಮೊಹಮ್ಮದ್ (ಜೆಇಎಂ) ಹಾಗೂ ಹಿಜ್ಬುಲ್ ಮುಜಾಹಿದ್ದೀನ್‌ (ಎಚ್‌ಎಂ) ಸಂಘಟನೆಗಳಿಗೆ ಸೇರಿದವರು ಎಂದಿರುವ  ಅವರು, ಅವರಿಂದ ಮೂರು ಎ.ಕೆ. ಶ್ರೇಣಿಯ ರೈಫಲ್‌ಗಳು, ಒಂದು ಎಸ್‌ಎಲ್‌ಆರ್ ಹಾಗೂ ಒಂದು ಪಿಸ್ತೂಲ್‌ ಅನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.

ಉಗ್ರರು ಇರುವ ಖಚಿತ ಮಾಹಿತಿ ಮೇರೆಗೆ  ಕೆಲ್ಲೆರ್ ಪೊಲೀಸ್‌ ಠಾಣೆ ವ್ಯಾಪಿಯ ಕದ್ದರ್‌ ಅರಣ್ಯ ಪ್ರದೇಶದಲ್ಲಿ ಪೊಲೀಸರು, ಸೇನೆ ಹಾಗೂ ಸಿಆರ್‌ಪಿಎಫ್‌ ಅವರನ್ನೊಳಗೊಂಡ ಭದ್ರತಾ ಸಿಬ್ಬಂದಿಯು ಗುರುವಾರ ಮುಂಜಾನೆ ಎನ್‌ಕೌಂಟರ್‌ ಕಾರ್ಯಾಚರಣೆ ನಡೆಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com