
ನವದೆಹಲಿ: 'ಮೆಸೆಂಜರ್ ಆಫ್ ಗಾಡ್ (ಎಂಎಸ್‌ಜಿ) ಚಿತ್ರ ಬಿಡುಗಡೆಗೆ ಹಸಿರು ನಿಶಾನೆ ದೊರೆತಿರುವುದಕ್ಕೆ ಬೇಸರ ವ್ಯಕ್ತಪಡಿಸಿ, ಅಧ್ಯಕ್ಷೆ ಸ್ಥಾನಕ್ಕೆ ಲೀಲಾ ಸಾಮ್ಸನ್ ರಾಜಿನಾಮೆ ನೀಡಿರುವ ಬೆನ್ನಲ್ಲೇ ಮತ್ತೋರ್ವ ಸದಸ್ಯೆ ಇರಾ ಭಾಸ್ಕರ್ ಅವರು ರಾಜಿನಾಮೆ ನೀಡಿದ್ದಾರೆ.
ಮೆಸೆಂಜರ್ ಆಫ್ ಗಾಡ್ ಚಿತ್ರಕ್ಕೆ ಮಾನ್ಯತೆ ನೀಡುವಲ್ಲಿ ಕೇಂದ್ರ ಸರ್ಕಾರ ಹಸ್ತಕ್ಷೇಪ ಮಾಡಿದ್ದು, ಕೇಂದ್ರ ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದ ಸೆನ್ಸಾರ್ ಮಂಡಳಿಯ ಅಧ್ಯಕ್ಷೆ ಲೀಲಾ ಸ್ಯಾಮ್ಸನ್ ಅವರು ಇಂದು ತಮ್ಮ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದರು.
ದೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಮ್ ಸಿಂಗ್ ಅವರನ್ನು ಬಿಂಬಿಸುವ 'ಮೆಸೆಂಜರ್ ಆಫ್ ಗಾಡ್' ಚಿತ್ರ ಬಿಡುಗಡೆಗೆ ಪ್ರಮಾಣೀಕರಣ ಮಂಡಳಿ (ಎಫ್‌ಸಿಎಟಿ) ಹಸಿರು ನಿಶಾನೆ ತೋರಿಸಿರುವ ಹಿನ್ನೆಲೆಯಲ್ಲಿ ಎಂಎಸ್‌ಜಿ ಚಿತ್ರ ಈಗಾಗಲೇ ತೆರೆ ಕಂಡಿದೆ. ಆದರೆ ಎಫ್‌ಸಿಎಟಿಯ ಈ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿರುವ ಹಲವು ಸಂಘಟನೆಗಳು ಚಿತ್ರದ ವಿರುದ್ಧ ಪ್ರತಿಭಟನೆ ನಡೆಸುತ್ತಿದೆ.
Advertisement