ಸೆನ್ಸಾರ್ ಬೋರ್ಡ್ ಮುಖ್ಯಸ್ಥೆ ಸ್ಥಾನಕ್ಕೆ ಲೀಲಾ ಸಾಮ್ಸನ್ ರಾಜಿನಾಮೆ

ದೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಮ್ ಸಿಂಗ್ ಅವರನ್ನು ಬಿಂಬಿಸುವ 'ಮೆಸೆಂಜರ್ ಆಫ್ ಗಾಡ್‌'(ಎಂಎಸ್‌ಜಿ) ಚಿತ್ರ ಬಿಡುಗಡೆಗೆ ಹಸಿರು ನಿಶಾನೆ ದೊರೆತ ಹಿನ್ನಲೆಯಲ್ಲಿ ಕೇಂದ್ರ ಸೇನ್ಸಾರ್...
ಲೀಲಾ ಸಾಮ್ಸನ್
ಲೀಲಾ ಸಾಮ್ಸನ್

ನವದೆಹಲಿ: ದೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಮ್ ಸಿಂಗ್ ಅವರನ್ನು ಬಿಂಬಿಸುವ 'ಮೆಸೆಂಜರ್ ಆಫ್ ಗಾಡ್‌'(ಎಂಎಸ್‌ಜಿ) ಚಿತ್ರ ಬಿಡುಗಡೆಗೆ ಹಸಿರು ನಿಶಾನೆ ದೊರೆತ ಹಿನ್ನಲೆಯಲ್ಲಿ ಕೇಂದ್ರ ಸೇನ್ಸಾರ್ ಬೋರ್ಡ್ ಅಧ್ಯಕ್ಷೆ ಸ್ಥಾನಕ್ಕೆ ಲೀಲಾ ಸಾಮ್ಸನ್ ರಾಜಿನಾಮೆ ನೀಡಿದ್ದಾರೆ.

ಗುರ್ಮಿತ್ ರಾಮ್ ರಹೀಮ್ ಸಿಂಗ್ ಅವರನ್ನು ಬಿಂಬಿಸುವ 'ಮೆಸೆಂಜರ್ ಆಫ್ ಗಾಡ್‌' ಚಿತ್ರ ಬಿಡುಗಡೆಗೆ ಪ್ರಮಾಣೀಕರಣ ಮಂಡಳಿ(ಎಫ್‌ಸಿಎಟಿ) ಹಸಿರು ನಿಶಾನೆ ತೋರಿಸಿದೆ. ಇಂದು ವಿಶ್ವಾದ್ಯಂತ ತೆರೆ ಕಾಣುತ್ತಿದ್ದು, ಇದಕ್ಕೆ ಬೇಸರ ವ್ಯಕ್ತಪಡಿಸಿರುವ ಲೀಲಾ ಅವರು ರಾಜಿನಾಮೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೆಸೆಂಜರ್ ಆಫ್ ಗಾಡ್ ಚಿತ್ರಕ್ಕೆ ಮಾನ್ಯತೆ ನೀಡುವಲ್ಲಿ ಕೇಂದ್ರ ಸರ್ಕಾರ ಹಸ್ತಕ್ಷೇಪ ಮಾಡಿದೆ. ಕೇಂದ್ರದ ಈ ವರ್ತನೆಯಿಂದ ಬೇಸರ ಉಂಟಾಗಿದ್ದು ರಾಜಿನಾಮೆ ನೀಡಿದ್ದೇನೆ ಎಂದು ಲೀಲಾ ಅವರು ಹೇಳಿದ್ದಾರೆ.

ಆದರೆ ಈ ಆರೋಪವನ್ನು ಸರ್ಕಾರ ತಳ್ಳಿಹಾಕಿದೆ. ಮೆಸೆಂಜರ್ ಆಫ್ ಗಾಡ್ ಚಿತ್ರಕ್ಕೆ ಮಾನ್ಯತೆ ನೀಡುವಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಿಲ್ಲ. ರಾಜಿನಾಮೆ ನೀಡುವುದು ಲೀಲಾ ಅವರ ವೈಯಕ್ತಿಕ ನಿರ್ಧಾರ. ಈ ಬಗ್ಗೆ ಸರ್ಕಾರ ಏನೂ ಹೇಳಲು ಇಚ್ಛಿಸುವುದಿಲ್ಲ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಹಾಯಕ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಶುಕ್ರವಾರ ಹೇಳಿದ್ದಾರೆ.


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com