ಬೊಕೋ ಉಗ್ರರ ಕುಕೃತ್ಯಕ್ಕೆ ಉಪಗ್ರಹ ಚಿತ್ರ ಸಾಕ್ಷಿ

ಬೊಕೋ ಹರಾಂ ಉಗ್ರರು ಎರಡು ವಾರದ ಹಿಂದೆ ಉತ್ತರ ನೈಜೀರಿಯಾದ ಬಾಗಾ ಮತ್ತು...
ಬೊಕೋ ಉಗ್ರರ ಕುಕೃತ್ಯಕ್ಕೆ ಉಪಗ್ರಹ ಚಿತ್ರ ಸಾಕ್ಷಿ

ಲಾಗೋಸ್(ನೈಜೀರಿಯಾ): ಬೊಕೋ ಹರಾಂ ಉಗ್ರರು ಎರಡು ವಾರದ ಹಿಂದೆ ಉತ್ತರ ನೈಜೀರಿಯಾದ ಬಾಗಾ ಮತ್ತು ಡೊರೋನ್ ಬಾಗದಲ್ಲಿ ನಡೆಸಿದ ಸಾಮೂಹಿಕ ಕಗ್ಗೊಲೆಗೆ ಸಂಬಂಧಿಸಿದ ಉಪಗ್ರಹ ಚಿತ್ರವನ್ನು ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆ ಆಮ್ನೆಸ್ಟಿ ಇಂಟರ್ ನ್ಯಾಷನಲ್ ಸಂಸ್ಥೆ ಗುರುವಾರ ಬಿಡುಗಡೆ ಮಾಡಿದೆ.

ದಾಳಿ ನಡೆಯುವ ಮೊದಲ ದಿನವಾದ ಜ.2 ಹಾಗೂ ದಾಳಿ ನಡೆದ ನಂತರದ ದಿನ ಹಳ್ಳಿಯಲ್ಲಾದ ಬದಲವಾಣೆ ಕುರಿತು ವೈಮಾನಿಕ ಚಿತ್ರ ಇದಾಗಿದೆ. ಬೊಕೋ ಹರಾಂ ಉಗ್ರರು ನತಡೆಸಿದ ಅತ್ಯಂತ ಹೇಯದಾಳಿ ಇದಾಗಿದೆ. ದಾಳಿಯಿಂದಾಗಿ 2000 ಮಂದಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.

ಉಗ್ರರ ದಾಳಿಗೆ ಹೆದರಿ ಕನಿಷ್ಠ 20 ಸಾವಿರ ಮಂದಿ ಸ್ಥಳದಿಂದ ಪರಾರಿಯಾಗಿದ್ದರು.

ಉಗ್ರರ ಈ ದಾಳಿಯನ್ನು ಅಮೆರಿಕದ ವಿದೇಶಾಂಗ ಸಚಿವ ಜಾನ್ ಕೆರ್ರಿ ಮಾನವತೆಯ ಮೇಲೆ ನಡೆದ ಕ್ರೌರ್ಯ ಎಂದು ಬಣ್ಣಿಸಿದ್ದಾರೆ. ಮಹಿಳೆಯರು, ಮಕ್ಕಳು, ವೃದ್ಧರು ಎನ್ನುವುದನ್ನೂ ನೋಡದೆ ಉಗ್ರರು ಈ ಪಟ್ಟಣಗಳಲ್ಲಿ ಸಾಮೂಹಿಕ ಕಗ್ಗೊಲೆ ನಡೆಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com