ಪ್ಯಾರಿಸ್ ರೇಲ್ವೆ ನಿಲ್ದಾಣ ಸ್ಫೋಟಿಸುವ ಬೆದರಿಕೆ: 10 ಮಂದಿ ಬಂಧನ
ಪ್ಯಾರಿಸ್: ಪ್ಯಾರಿಸ್‌ನ ಗ್ಯಾರ್‌ಡಿಎಲ್ ಎಸ್ಟ್ ರೇಲ್ವೆ ನಿಲ್ದಾಣದಲ್ಲಿ ಬಾಂಬ್ ಸ್ಪೋಟಿಸುವ ಬೆದರಿಕೆ ಹಿನ್ನೆಲೆಯಲ್ಲಿ ನಿಲ್ದಾಣವನ್ನು ಬಂದ್ ಮಾಡಲಾಗಿದ್ದು, ಅಲ್ಲಿದ್ದ ಪ್ರಯಾಣಿಕರನ್ನು ಸ್ಥಳಾಂತರಿಸಲಾಗಿದೆ. ಈ ಸಂಬಂಧ 10 ಮಂದಿಯನ್ನು ಭಯೋತ್ಪಾದನೆ ವಿರೋಧಿ ಕಾಯ್ದೆಯಡಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಚಾರ್ಲಿ ಹೆಬ್ಡೋ ಪತ್ರಿಕಾ ಕಚೇರಿ ಮೇಲೆ ಉಗ್ರರು ದಾಳಿ ಮಾಡಿ 12 ಜನರ ಸಾವಿಗೆ ಕಾರಣರಾಗಿದ್ದರು. ಇಸ್ಲಾಮಿಕ್ ಸ್ಟೇಟ್ ಸ್ಥಾಪನೆಯ ಗುರಿ ಹೊಂದಿರುವ ಉಗ್ರರು ಸಾರ್ವಜನಿಕ ಪ್ರದೇಶಗಳನ್ನು ಗುರಿಯಾಗಿರಿಸಿಕೊಂಡು ಗುಂಡಿನ ದಾಳಿಗಳನ್ನು ನಡೆಸುವ ಸಾಧ್ಯತೆಗಳಿದ್ದು, ಇಂತಹ ಅನಾಹುತಗಳು ನಡೆಯದಂತೆ ಮುನ್ನಚ್ಚರಿಗೆ ಕ್ರಮಕೈಗೊಂಡಿರುವ ಪೊಲೀಸರು ರೇಲ್ವೆ ನಿಲ್ದಾಣವನ್ನು ಸಂಪೂರ್ಣವಾಗಿ ಬಂದ್ ಮಾಡಿದ್ದಾರೆ.
ಪ್ಯಾರಿಸ್‌ನ ಪ್ರಮುಖ ರೇಲ್ವೇ ನಿಲ್ದಾಣಗಳಲ್ಲಿ ಗ್ಯಾರಿಡಿಎಲ್ ಎಸ್ಟ್ ಒಂದಾಗಿದೆ. ಉತ್ತರ ಪ್ಯಾರಿಸ್‌ನ ಮುಖ್ಯ ನಗರದಲ್ಲಿದ್ದು, ಅದು ಪ್ರಮುಖ ನಗರ ಹಾಗೂ ದೇಶಗಳ ನಡುವೆ ಸಂಪರ್ಕ ಸೇತುವೆಯಾಗಿದೆ.
ಬಾಂಬ್ ಸ್ಫೋಟಿಸುವ ಬೆದರಿಕೆ ಹಾಕಿರುವವ ಹೆಸರನ್ನು ಸಾರ್ವಜನಿಕವಾಗಿ ಹೇಳುವಂತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ