'ನಾನು ಅಮೇರಿಕಾ ಪ್ರಜೆ': ಬಾಬಿ ಜಿಂದಾಲ್

ನನ್ನ ತಂದೆ ತಾಯಿ 4 ದಶಕಗಳ ಹಿಂದೆಯೇ ಅಮೇರಿಕಾಗೆ ಬಂದಿದ್ದು, ನಾನು ಅಮೆರಿಕಾ ಪ್ರಜೆ..
ಲೂಸಿಯಾನ ಗವರ್ನರ್ ಬಾಬಿ ಜಿಂದಾಲ್
ಲೂಸಿಯಾನ ಗವರ್ನರ್ ಬಾಬಿ ಜಿಂದಾಲ್

ವಾಷಿಂಗ್ಟನ್: ನನ್ನ ತಂದೆ ತಾಯಿ 4 ದಶಕಗಳ ಹಿಂದೆಯೇ ಅಮೇರಿಕಾಗೆ ಬಂದಿದ್ದು, ನಾನು ಅಮೆರಿಕಾ ಪ್ರಜೆ ಎಂದು ಲೂಸಿಯಾನದ ಗವರ್ನರ್ ಭಾರತೀಯ ಸಂಜಾತ ಬಾಬಿ ಜಿಂದಾಲ್ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ವಾಷಿಂಗ್ಟನ್ನಲ್ಲಿ ಮಾತನಾಡಿದ ಅವರು, ನಾನು ಅಮೇರಿಕಾ ಪ್ರಜೆಯಾಗಿರಲು ಇಲ್ಲಿಗೆ ಬಂದಿದ್ದು, ಭಾರತೀಯ ಮೂಲದ ಅಮೇರಿಕಾ ಪ್ರಜೆಯಾಗಿರಲು ಅಲ್ಲ ಎಂದು ಬಾಬಿ ಜಿಂದಾಲ್ ಹೇಳಿದ್ದಾರೆ.

ಇದೇ ವೇಳೆ ವರ್ಣ ತಾರತಮ್ಯ ಹಾಗೂ ಸಂಸ್ಕೃತಿಯ ಕುರಿತು ಮಾತನಾಡಿರುವ ಬಾಬಿ ಜಿಂದಾಲ್ ಅವರು, ಮನುಷ್ಯನ ಚರ್ಮದ ಬಣ್ಣನೋಡಿ ಆತ ಯಾವ ಸಂಸ್ಕೃತಿ ಹಾಗೂ ಯಾವ ದೇಶಕ್ಕೆ ಸೇರಿದವನು ಎಂದು ನಿರ್ಧರಿಸುವುದು ಮೂರ್ಖತನದ ಕೆಲಸ. ಅಮೆರಿಕಾ ದೇಶವನ್ನು ಬಹು ಸಾಂಸ್ಕೃತಿಕ ಸಮಾಜವನ್ನಾಗಿ ನಿರ್ಮಾಣ ಮಾಡಬೇಕು.

ನನಗೆ ಅಮೆರಿಕಾದಲ್ಲಿರುವ ಭಾರತೀಯ ಎಂದು ಕರೆಸಿಕೊಳ್ಳುವುದು ಇಷ್ಟವಿಲ್ಲ. ನನ್ನ ತಂದೆ ತಾಯಿ ದೊಡ್ಡ ಕನಸನ್ನು ಹೊತ್ತು ಅಮೇರಿಕಾಗೆ ಬಂದವರು. ಅವರ ಕನಸನ್ನು ನನಸು ಮಾಡಿಕೊಂಡರು. ಅಮೇರಿಕಾಗೆ ಬಂದದ್ದು ಅಮೇರಿಕಾದ ಪ್ರಜೆಯಾಗಿ ನೆಲೆಸಲು. ಭಾರತೀಯ-ಅಮೇರಿಕಾ ಪ್ರಜೆಯಾಗಿರಲು ಅಲ್ಲ. ಭಾರತೀಯ ಪ್ರಜೆಯಾಗಿರಬೇಕಿದ್ದರೆ ಅಮೇರಿಕಾಗೆ ಬಂದು ನೆಲೆಸುವ ಅಗತ್ಯವಿರಲಿಲ್ಲ. ಹಾಗೆಂದು ಭಾರತೀಯರಾಗಿರಲು ನನ್ನ ತಂದೆ ತಾಯಿಗೆ ಮುಜುಗರವಾಗುತ್ತಿದೆ ಎಂದು ಅಲ್ಲ. ಭಾರತವನ್ನು ಅವರು ಪ್ರೀತಿಸುತ್ತಿದ್ದರು. ಆದರೆ ಅವರು ಉನ್ನತ ಮಟ್ಟಕ್ಕೆ ಹೋಗುವ ಸಲುವಾಗಿ ಉತ್ತಮ ಅವಕಾಶ ಹಾಗೂ ಸ್ವಾತಂತ್ರ್ಯವನ್ನು ಹುಡುಕಿಕೊಂಡು ಅಮೇರಿಕಾಗೆ ಬಂದವರು ಎಂದು ಜಿಂದಾಲ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com