ವಿಮಾನದ ಕಾಕ್‌ಪಿಟ್‌ನಲ್ಲೇ ಪೈಲಟ್‌ನಿಂದ ಸಹೋದ್ಯೋಗಿ ಮೇಲೆ ಹಲ್ಲೆ

ಏರ್ ಇಂಡಿಯಾ ವಿಮಾನ
ಏರ್ ಇಂಡಿಯಾ ವಿಮಾನ

ಚೆನ್ನೈ: ಏರ್ ಇಂಡಿಯಾ ವಿಮಾನದ ಪೈಲಟ್ ತನ್ನ ಸಹೋದ್ಯೋಗಿ ವಿಮಾನದ ಇಂಜಿನಿಯರ್ ಅನ್ನು ಕಾಕ್‌ಪಿಟ್‌ನಲ್ಲಿ ಕೂಡಿಹಾಕಿ ಹಲ್ಲೆ ನಡೆಸಿದ ಘಟನೆ ಶನಿವಾರ ಚೆನ್ನೈ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಚೆನ್ನೈ-ಪ್ಯಾರಿಸ್ ವಿಮಾನ ಎಐ 143ನಲ್ಲಿ ಈ ಘಟನೆ ನಡೆದಿದ್ದು, ಇದರಿಂದ ವಿಮಾನ 4 ಗಂಟೆ ವಿಳಂಬವಾಗಿದೆ. ವರದಿಗಳ ಪ್ರಕಾರ, ವಿಮಾನದ ಪೈಲಟ್ ಮಾಣಿಕ್‌ಲಾಲ್ ಮತ್ತು ಇಂಜಿನಿಯರ್ ಕಣ್ಣನ್ ಇಬ್ಬರು ಕಾಕ್‌ಪಿಟ್‌ನಲ್ಲಿ ಜಗಳ ಮಾಡಿಕೊಂಡಿದ್ದಾರೆ. ಘಟನೆಯಲ್ಲಿ ಕಣ್ಣನ್ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯ ಕುರಿತು ತನಿಖೆಗೆ ಆದೇಶಿಸಲಾಗಿದೆ ಎಂದು ಏರ್ ಇಂಡಿಯಾ ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com