3ನೇ ಹಂತಕ್ಕೆ ಎಫ್ಎಂಗಳ ವಲಸೆ ಇ-ಹರಾಜಿಗೆ ಸಚಿವ ಸಂಪುಟ ಅಸ್ತು

ಎಫ್ಎಂಗಳ 2ನೇ ಹಂತದಿಂದ ಮೂರನೇ ಹಂತಕ್ಕೆ ವಲಸೆ ಹಾಗೂ ಎಫ್ಎಂಗಳ ಇ-ಹರಾಜು...
ಎಫ್ಎಂಗಳ ಇ-ಹರಾಜು ಪ್ರಸ್ತಾಪಕ್ಕೆ ಪ್ರಧಾನಿ ಮೋದಿ ಒಪ್ಪಿಗೆ
ಎಫ್ಎಂಗಳ ಇ-ಹರಾಜು ಪ್ರಸ್ತಾಪಕ್ಕೆ ಪ್ರಧಾನಿ ಮೋದಿ ಒಪ್ಪಿಗೆ

ನವದೆಹಲಿ: ಹಾಲಿ ಸೇವೆಯಲ್ಲಿರುವ ಎಫ್ಎಂಗಳ 2ನೇ ಹಂತದಿಂದ ಮೂರನೇ ಹಂತಕ್ಕೆ ವಲಸೆ ಹಾಗೂ ಎಫ್ಎಂಗಳ ಇ-ಹರಾಜು ಪ್ರಸ್ತಾಪಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟ ಸಭೆ ಶುಕ್ರವಾರ ಒಪ್ಪಿಗೆ ನೀಡಿದೆ.

ಸರ್ಕಾರದ ಈ ಕ್ರಮದಿಂದ ಶೋತೃಗಳಿಗೆ ಹೆಚ್ಚಿನ ಎಫ್ಎಂಗಳ ಇ-ಹರಾಜು ಪ್ರಸ್ತಾಪಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟ ಸಭೆ ಶುಕ್ರವಾರ ಒಪ್ಪಿಗೆ ನೀಡಿದೆ.

ಸರ್ಕಾರದ ಈ ಕ್ರಮದಿಂದ ಶೋತೃಗಳಿಗೆ ಹೆಚ್ಚಿನ ಎಫ್ಎಂ ಚಾನೆಲ್ಗಳನ್ನು ಕೇಳಲು ಸಾಧ್ಯವಾಗುವುದಲ್ಲದೆ, ಅವುಗಳ ಗುಣಮಟ್ಟವೂ ಸುಧಾರಣೆಯಾಗಲಿದೆ. ಪ್ರಸ್ತಾವಿತ ಇ-ಹರಾಜಿನಿಂದಾಗಿ ಸರ್ಕಾರದ ಬೊಕ್ಕಸಕ್ಕೆ ರೂ.500 ಕೋಟಿ ಆದಾಯ ಸಿಗಲಿದೆ.

ಇದಲ್ಲದೆ ಎರಡನೇ ಹಂತದಿಂದ ಮೂರನೇ ಹಂತಕ್ಕೆ ಹಾಲಿ ಇರುವ ಎಫ್ಎಂಗಳ ವಲಸೆಯಿಂದಾಗಿ ಮತ್ತಷ್ಟು ಆದಾಯ ಹರಿದು ಬರಲಿದೆ. ಸದ್ಯ 243 ಖಾಸಗಿ ಎಫ್ಎಂ ಚಾನೆಲ್ಗಳು ದೇಶದ 86 ನಗರಗಳಲ್ಲಿ ಕಾರ್ಯಾಚರಿಸುತ್ತಿವೆ.

ಮೂರನೇ ಹಂತದಲ್ಲಿ ಟ್ರಾಯ್(ಭಾರತೀಯ ದೂರಸಂಪರ್ಕ್ ನಿಯಂತ್ರಣ ಪ್ರಾಧಿಕಾರ) ಪ್ರಸ್ತಾಪಿಸಿದ್ದ ಪರವಾನಗಿ ಅವಧಿಯನ್ನು 10ರಿಂದ 15 ವರ್ಷಕ್ಕೆ ವಿಸ್ತರಿಸಲೂ ಸಂಪುಟ ಒಪ್ಪಿಗೆ ಸೂಚಿಸಿದೆ.

ಮೂರನೇ ಹಂತದ ವಿಸ್ತರಣೆ ವೇಳೆ ಸರ್ಕಾರವು ಆಕಾಶವಾಣಿಯ ನ್ಯೂಸ್ ಬುಲೆಟಿನ್ಗಳನ್ನು ಪ್ರಸಾರ ಮಾಡಲು ಅವಕಾಶ ನೀಡಲಾಗಿದೆ. ಇದಲ್ಲದೆ, ಸುದ್ದಿಯೇತರ ವಿಚಾರಗಳಾದ ಟ್ರಾಫಿಕ್, ಹವಾಮಾನ ಹಾಗೂ ಕ್ರೀಡಾಕೂಟಗಳ ಕುರಿತ ಮಾಹಿತಿ ಪ್ರಸಾರ ಮಾಡಲೂ ಸಿಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com