ಎಂಎಸ್‌ಜಿ ವಿವಾದ: ಸ್ಯಾಮ್ಸನ್ ಬೆಂಬಲಿಸಿ ಸಾಮೂಹಿಕ ರಾಜಿನಾಮೆ

ದೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್‌ಮೀತ್ ರಾಮ್ ರಹೀಂ ಸಿಂಗ್ ಅವರು ನಟಿಸಿರುವ 'ಮೆಸೆಂಜರ್ ಆಫ್ ಗಾಡ್‌' ಚಿತ್ರದ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ಸೆನ್ಸಾರ್ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದ ಲೀಲಾ ಸ್ಯಾಮ್ಸನ್...
ಲೀಲಾ ಸ್ಯಾಮ್ಸನ್
ಲೀಲಾ ಸ್ಯಾಮ್ಸನ್

ನವದೆಹಲಿ: ದೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್‌ಮೀತ್ ರಾಮ್ ರಹೀಂ ಸಿಂಗ್ ಅವರು ನಟಿಸಿರುವ 'ಮೆಸೆಂಜರ್ ಆಫ್ ಗಾಡ್‌'(ಎಂಎಸ್‌ಜಿ) ಚಿತ್ರದ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ಸೆನ್ಸಾರ್ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದ ಲೀಲಾ ಸ್ಯಾಮ್ಸನ್ ಅವರನ್ನು ಬೆಂಬಲಿಸಿ ಮಂಡಳಿಯ 9 ಸದಸ್ಯರೂ ಶನಿವಾರ ರಾಜಿನಾಮೆ ನೀಡಿದ್ದಾರೆ.

ಕೇಂದ್ರ ಸರ್ಕಾರ ಸೆನ್ಸಾರ್ ಮಂಡಳಿಯಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂದು ಆರೋಪಿಸಿ ನಿನ್ನೆಯಷ್ಟೆ ಲೀಲಾ ಸ್ಯಾಮ್ಸನ್ ಅವರು ರಾಜಿನಾಮೆ ನೀಡಿದ್ದರು. ಅವರನ್ನು ಬೆಂಬಲಿಸಿ ಇಂದು ಸೆನ್ಸಾರ್ ಮಂಡಳಿಯ 9 ಸದಸ್ಯರೂ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವರಿಗೆ ತಮ್ಮ ರಾಜಿನಾಮೆ ಪತ್ರ ಕಳುಹಿಸಿದ್ದಾರೆ.

ಕೇಂದ್ರೀಯ ಸೆನ್ಸಾರ್ ಮಂಡಳಿಯ ಸದಸ್ಯರಾದ ಭಾಸ್ಕರ್, ಲೋರಾ ಪ್ರಭು, ಪಂಕಜ್ ಶರ್ಮಾ, ರಾಜೀವ್ ಮಸಂದ್, ಟಿ.ಜಿ. ತ್ಯಾಗರಾಜನ್, ಮಮಂಗ್ ದೈ, ಶುಭ್ರಾ ಗುಪ್ತಾ ಮತ್ತು ಶಾಜಿ ಎನ್ ಕರುಣ್ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.

ಎಂಎಸ್‌ಜಿ ವಿವಾದ ಏನು?
ಕೇಂದ್ರೀಯ ಸೆನ್ಸಾರ್ ಮಂಡಳಿಯ ಚಿತ್ರ ವಿರ್ಮಾಣಾ ಸಭೆಯಲ್ಲಿ ವಿವಾದಿತ ಎಂಎಸ್‌ಜಿ ಚಿತ್ರಕ್ಕೆ ಯಾವುದೇ ರೇಟಿಂಗ್ಸ್ ನೀಡದೇ ಇರಲು ನಿರ್ಧರಿಸಿತ್ತು. ಹೀಗಾಗಿ ಸಿನಿಮಾ ಬಿಡುಗಡೆ ವಿಚಾರ ಚಲನಚಿತ್ರ ಪ್ರಮಾಣೀಕರಣ ಮೇಲ್ಮನವಿ ಪ್ರಾಧಿಕಾರ(ಎಫ್‌ಸಿಎಟಿ)ಕ್ಕೆ ತಲುಪಿತು. ಅಲ್ಲದೆ ಗುರುವಾರ ತಡರಾತ್ರಿ ಪ್ರಾಧಿಕಾರ ಸಿನಿಮಾ ಬಿಡುಗಡೆಗೆ ಒಪ್ಪಿಗೆ ನೀಡಿತ್ತು. ಇದರಿಂದ ನೊಂದ ಸೆನ್ಸಾರ್ ಮಂಡಳಿ ಅಧ್ಯಕ್ಷೆ ಲೀಲಾ ಸ್ಯಾಮ್ಸನ್ ಅವರು ರಾಜಿನಾಮೆ ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com