
ಬೆಂಗಳೂರು: ಮಾಧ್ಯಮಗಳ ದುರ್ಬಳಕೆ ಮಾಡಿಕೊಂಡು ಪೊಲೀಸರು ಭಟ್ಕಳವನ್ನು ಪಾಕಿಸ್ತಾನದಂತೆ ಬಿಂಬಿಸುತ್ತಿದ್ದಾರೆ ಎಂದು ಬಂಧಿತ ಆರೋಪಿ ಡಾ.ಅಫಾಕ್ ಪರ ವಕೀಲ ಸುಲ್ತಾನ್ ಬೆರ್ರಿ ಆರೋಪಿಸಿದರು.
ಭಾರತ-ಪಾಕ್ ಮೊದಲು ಒಂದೇ ರಾಷ್ಟ್ರ ಆಗಿತ್ತು. ವಿಭಜನೆಯ ನಂತರ ಪಾಕ್ ಜೊತೆ ಭಾರತದ ಮುಸಲ್ಮಾನರು ಸಂಬಂಧ ಕಡಿದುಕೊಳ್ಳಲು ಸಾಧ್ಯವಿಲ್ಲ. ಇದೇ ಕಾರಣದಿಂದ ಪಾಕ್ ಉಗ್ರರ ಜೊತೆ ಸಂಪರ್ಕ ಇದೆ ಎಂದು ಭಟ್ಕಳ ಯುವಕರನ್ನು ಬಂಧಿಸಿರುವುದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಪೊಲೀಸರು ಎಫ್‌ಐಆರ್‌ನಲ್ಲಿ ಮೂವರು ಬಂಧಿತ ಭಟ್ಕಳ ಯುವಕರ ಮೇಲೆ ಸುಳ್ಳು ಮೊಕದ್ದಮೆ ದಾಖಲಿಸಲಾಗಿದೆ. ಮನೆಯಲ್ಲಿ ಬಂಧಿಸಿರುವುದಾಗಿ ಹೇಳಿದ್ದಾರೆ. ಆದರೆ ಅಫಾಕ್ ಮನೆಯಲ್ಲೇ ಇರಲಿಲ್ಲ. ಬಂಧಿತ ಕುಟುಂಬಿಕರ ನೋವನ್ನು ಪೊಲೀಸರು ಅರ್ಥ ಮಾಡಿಕೊಳ್ಳುತ್ತಿಲ್ಲ. ತಮ್ಮ ಪಾಡಿಗೆ ವೃತ್ತಿ ಮಾಡಿಕೊಂಡಿದ್ದ ಹೋಮಿಯೋಪತಿ ವೈದ್ಯ ಅಫಾಕ್, ಸಬೂರ್, ಸದ್ದಾಂ ಹುಸೇನ್ ಎಂಬ ಅಮಾಯಕರನ್ನು ಬಂಧಿಸಿರುವುದು ಸರಿಯಲ್ಲ ಎಂದರು.
Advertisement