ತಪ್ಪಿದ್ದರೆ ಧ್ವನಿಯೆತ್ತಬಹುದಿತ್ತು: ವೆಂಕಯ್ಯನಾಯ್ಡು

ಎಂಎಸ್‌ಜಿ ಚಿತ್ರಕ್ಕೆ ಸರ್ಕಾರ ಅನುಮತಿ ನೀಡಿರುವುದರಲ್ಲಿ ತಪ್ಪು ನಿರ್ಧಾರ ಕೈಗೊಂಡಿದ್ದರೆ ನಿರ್ಧಾರದ...
ಕೇಂದ್ರ ಸಚಿವ ವೆಂಕಯ್ಯ ನಾಯ್ಡು
ಕೇಂದ್ರ ಸಚಿವ ವೆಂಕಯ್ಯ ನಾಯ್ಡು

ಚೆನ್ನೈ: ಚಿತ್ರಕ್ಕೆ ಅನುಮತಿ ನೀಡುವುದರಲ್ಲಿ ಸರ್ಕಾರ ಅನುಮತಿ ನೀಡುವುದರಲ್ಲಿ ತಪ್ಪು ನಿರ್ಧಾರ ಕೈಗೊಂಡಿದ್ದರೆ ನಿರ್ಧಾರದ ವಿರುದ್ಧ ಸೆನ್ಸಾರ್ ಮಂಡಳಿ ಅಧಿಕಾರಿಗಳು ಧ್ವನಿಯೆತ್ತಬಹುದಿತ್ತು ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಹೇಳಿದ್ದಾರೆ.

'ಮೆಸೆಂಜರ್ ಆಫ್ ಗಾಡ್‌' (ಎಂಎಸ್‌ಜಿ) ಚಿತ್ರ ಬಿಡಗಡೆಗೆ ಮೇಲ್ಮನವಿ ಪ್ರಾಧಿಕಾರ ಹಸಿರು ನಿಶಾನೆ ತೋರಿದ್ದಕ್ಕೆ ಅಸಮಾಧಾನಗೊಂಡು ಸೆನ್ಸಾರ್ ಮಂಡಳಿಯ ಸದಸ್ಯರು ರಾಜಿನಾಮೆ ನೀಡುತ್ತಿರುವ ಹಿನ್ನೆಲೆಯಲ್ಲಿ ಇಂದು ಮಾಧ್ಯಮದೊಂದಿಗೆ ಮಾತನಾಡಿರುವ ವೆಂಕಯ್ಯ ನಾಯ್ಡು ಅವರು, ಸೆನ್ಸಾರ್ ಮಂಡಳಿಯ ಅಧಿಕಾರಿಗಳು ರಾಜಿನಾಮೆ ನೀಡುವುದರ ಬದಲು ತಪ್ಪಿದ್ದರೆ ತಮ್ಮ ಅಧಿಕಾರವನ್ನು ಬಳಸಿಕೊಂಡು ಆದರ ವಿರುದ್ಧ ಧ್ವನಿ ಎತ್ತಬಹುದಿತ್ತು. ಆದರೆ ಅವರು ಅದನ್ನು ಮಾಡಲಿಲ್ಲ.

ಯುಪಿಎ ಸರ್ಕಾರದ ಅವಧಿಯಲ್ಲಿ ಸೆನ್ಸಾರ್ ಮಂಡಳಿಯ ಸದಸ್ಯರನ್ನು ನೇಮಕ ಮಾಡಲಾಗಿದ್ದು, ಪ್ರಸ್ತುತ ಬಿಜೆಪಿ ಸರ್ಕಾರವನ್ನು ದೂಷಿಸುವುದು ಸರಿಯಲ್ಲ ಎಂದು ನಾಯ್ಡು ಹೇಳಿದ್ದಾರೆ.

ಕೇಂದ್ರೀಯ ಸೆನ್ಸಾರ್ ಮಂಡಳಿಯ ಸಭೆಯಲ್ಲಿ ವಿವಾದಿತ ಎಂಎಸ್‌ಜಿ ಚಿತ್ರಕ್ಕೆ ಯಾವುದೇ ರೇಟಿಂಗ್ಸ್ ನೀಡದೇ ಇರಲು ನಿರ್ಧರಿಸಲಾಗಿತ್ತು. ಹೀಗಾಗಿ ಸಿನಿಮಾ ಬಿಡುಗಡೆ ವಿಚಾರವು  ಚಲನಚಿತ್ರ ಪ್ರಮಾಣೀಕರಣ ಮೇಲ್ಮನವಿ ಪ್ರಾಧಿಕಾರ (ಎಫ್‌ಸಿಎಟಿ)ರ ಮೆಟ್ಟಿಲೇರಿತ್ತು. ಅಲ್ಲದೆ ಗುರುವಾರ ತಡರಾತ್ರಿ ಪ್ರಾಧಿಕಾರ ಸಿನಿಮಾ ಬಿಡುಗಡೆಗೆ ಒಪ್ಪಿಗೆ ನೀಡಿತ್ತು. ಇದರಿಂದ ಅಸಮಾಧಾನಗೊಂಡ ಸೆನ್ಸಾರ್ ಮಂಡಳಿಯ ಅಧ್ಯಕ್ಷೆ ಲೀಲಾ ಸ್ಯಾಮ್ಸನ್ ಸೇರಿದಂತೆ 9 ಮಂದಿ ಸೆನ್ಸಾರ್ ಮಂಡಳಿ ಸದಸ್ಯರು ರಾಜಿನಾಮೆ ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com