ಯೋಧರ ಗುಂಡೇಟಿಗೆ ಜೆಎಂನ ಇಬ್ಬರು ಉಗ್ರರು ಬಲಿ
ಶ್ರೀನಗರ: ಉತ್ತರ ಕಾಶ್ಮೀರದ ಸೋಪೋರ್‌ನಲ್ಲಿ ಇಂದು ಬೆಳಿಗ್ಗೆ ಜೈಷ್-ಎ-ಮೊಹಮ್ಮದ್ ಸಂಘಟನೆಯ ಇಬ್ಬರು ಉಗ್ರರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿದ್ದಾರೆ.
ಸೋಪುರ ಪ್ರದೇಶದಲ್ಲಿ ಜೆಎಂ ಉಗ್ರರು ಅಡಗಿರುವ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಬೆಳಗ್ಗೆಯೇ ಭಾರತೀಯ ಗಡಿ ಭದ್ರತಾ ಪಡೆ (ಬಿಎಸ್‌ಎಫ್)ಯೋಧರು ಇಡೀ ಪ್ರದೇಶವನ್ನು ಸುತ್ತುವರಿದರು. ಈ ಸಂದರ್ಭ ಉಗ್ರರು ಸೇನಾ ಪಡೆ ಯೋಧರ ಮೇಲೆ ಗುಂಡು ಹಾರಿಸಿದ್ದಾರೆ. ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರು ಮೃತಪಟ್ಟಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.
ನಿರಂತರ ಗುಂಡಿನ ಕಾಳಗದ ನಂತರ ಇಬ್ಬರು ಉಗ್ರರು ಬಿಎಸ್‌ಎಫ್ ಗುಂಡಿಗೆ ಬಲಿಯಾದರು. ಸೋಪುರ್ ಜಿಲ್ಲೆಯ ಸೈದಾಪುರವನ್ನು ಸುತ್ತುವರಿದಿರುವ ಸೇನಾ ಪಡೆ ಇನ್ನೂ ಯಾರಾದರೂ ಉಗ್ರರಿರಬಹುದೇ ಎಂದು ಶೋಧಿಸುತ್ತಿದ್ದಾರೆ. ಉಗ್ರರಿಬ್ಬರು ಅಡಗಿದ್ದ ಮನೆಯನ್ನು ಸಂಪೂರ್ಣವಾಗಿ ತಪಾಸಣೆ ಮಾಡಲಾಗಿದೆ. ಇತ್ತೀಚೆಗೆ ಗಡಿ ಭಾಗದಲ್ಲಿ ಉಗ್ರರ ಒಳನುಸುಳುವಿಕೆ ಹೆಚ್ಚುತ್ತಿದ್ದು, ಸಮೀಪದ ಹಳ್ಳಿಗಳ ನಿವಾಸಿಗಳು ಆತಂಕಗೊಂಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ