ಸಲಿಂಗಿ ಎಂದು ಘೋಷಿಸಿಕೊಂಡ ಐರ್ಲೆಂಡ್ ಆರೋಗ್ಯ ಸಚಿವ
ಡಬ್ಲಿನ್: ಭಾರತೀಯ ಮೂಲದ ಐರ್ಲೆಂಡ್‌ನ ಹಿರಿಯ ಸಚಿವರೊಬ್ಬರು ತಾವು ಸಲಿಂಗಿ ಎಂದು ಬಹಿರಂಗವಾಗಿ ಘೋಷಿಸಿಕೊಂಡಿದ್ದಾರೆ.
ಆರೋಗ್ಯ ಸಚಿವ ಲಿಯೋ ವಾರ್ಡೇಕರ್ ಈ ರೀತಿ ರೇಡಿಯೋದಲ್ಲಿ ಘೋಷಣೆ ಮಾಡುತ್ತಿದ್ದಂತೆ ಕ್ಯಾಥೋಲಿಕ್ ದೇಶ ಐರ್ಲೆಂಡ್‌ನಲ್ಲಿ ಹೊಸ ವಿವಾದ ಸೃಷ್ಟಿಯಾಗಿದೆ.
ವಾರ್ಡೇಕರ್ ಅವರು ಈ ಘೋಷಣೆ ಮಾಡಿದ್ದು ತಮ್ಮ 36ನೇ ಹುಟ್ಟುಹಬ್ಬದ ಸಂಭ್ರಮದ ವೇಳೆ. ಕುಟುಂಬ, ಗೆಳೆಯರು, ಸಹೋದ್ಯೋಗಿಗಳು ಎಲ್ಲರಿಗೂ ನಾನು ಸಲಿಂಗಿ ಎನ್ನುವ ಕುರಿತು ಗೊತ್ತು ಅಥವಾ ಅನುಮಾನ ಇದೆ ಎಂದೂ ಇದೇ ವೇಳೆ ಅವರು ತಿಳಿಸಿದ್ದಾರೆ.
ಸಚಿವರ ಈ ಹೇಳಿಕೆ ಎಷ್ಟು ವಿವಾದ ಸೃಷ್ಟಿಸಿದೆಯೋ ಅದಕ್ಕಿಂತಲೂ ಹೆಚ್ಚು ಮಂದಿ ಅವರ ಪ್ರಾಮಾಣಿಕತೆ, ನೇರವಂತಿಕೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರು ಈ ರೀತಿ ಘೋಷಣೆ ಮಾಡಲು ಕಾರಣವೂ ಇದೆಯಂತೆ.
ಸಲಿಂಗಿಗಳ ಹಕ್ಕಿಗೆ ಧ್ವನಿಗೂಡಿಸುವ ನಿಟ್ಟಿನಲ್ಲಿ ಅವರು ನಿರ್ಧಾರ ಕೈಗೊಂಡಿದ್ದಾರೆ. ಸಲಿಂಗಿ ಮದುವೆಗೆ ಕಾನೂನು ಮಾನ್ಯತೆ ನೀಡುವುದು, ಸಲಿಂಗಿಗಳಿಗೆ ರಕ್ತದಾನ ಮಾಡಲು ಅವಕಾಶ ನೀಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಎರಡು ವರ್ಷದಿಂದ ಐರ್ಲೆಂಡ್‌ನಲ್ಲಿ ಆಗ್ರಹ ಕೇಳಿ ಬಂದಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ