ಪಹಲಾಜ್ ನಿಹಲಾನಿ
ದೇಶ
ಸೆನ್ಸಾರ್ ಮಂಡಳಿಗೆ ನಿಹಲಾನಿ ಅಧ್ಯಕ್ಷ
ಲೀಲಾ ಸ್ಯಾಮ್ಸನ್ ಅವರ ರಾಜಿನಾಮೆಯಿಂದ ತೆರವಾಗಿರುವ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ(ಸಿಬಿಎಫ್‌ಸಿ) ಅಥವಾ ಸೆನ್ಸಾರ್ ಮಂಡಳಿ ಮುಖ್ಯಸ್ಥ ಸ್ಥಾನಕ್ಕೆ...
ನವದೆಹಲಿ: ಲೀಲಾ ಸ್ಯಾಮ್ಸನ್ ಅವರ ರಾಜಿನಾಮೆಯಿಂದ ತೆರವಾಗಿರುವ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ(ಸಿಬಿಎಫ್‌ಸಿ) ಅಥವಾ ಸೆನ್ಸಾರ್ ಮಂಡಳಿ ಮುಖ್ಯಸ್ಥ ಸ್ಥಾನಕ್ಕೆ ನಿರ್ಮಾಪಕ ಪಹಲಾಜ್ ನಿಹಲಾನಿ ಅವರನ್ನು ನೇಮಕ ಮಾಡಿ ಕೇಂದ್ರ ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ.
ಇದೇ ವೇಳೆ, ಸ್ಯಾಮ್ಸನ್ ಜತೆಗೆ ರಾಜಿನಾಮೆ ನೀಡಿದ್ದ 9 ಸದಸ್ಯರ ಸ್ಥಾನಕ್ಕೂ ಹೊಸಬರನ್ನು ನೇಮಿಸಲಾಗಿದೆ.
ನೂತನ ಸದಸ್ಯರು: ಬಿಜೆಪಿ ನಾಯಕಿ ವಾಣಿ ತ್ರಿಪಾಠಿ ಠಿಕೂ, ನಿರ್ಮಾಪಕರಾದ ಅಶೋಕ್ ಪಂಡಿತ್, ಚಂದ್ರ ಪ್ರಕಾಶ್ ದ್ವಿವೇದಿ, ಚಿತ್ರಸಾಹಿತಿ ಮಿಹಿರ್ ಭುಟಾ, ಸಯೀದ್ ಅಬ್ದುಲ್ ಬರಿ, ರಮೇಶ್ ಪತಾಂಜೆ, ನಟ ಜಾರ್ಜ್ ಬೇಕರ್, ಜೀವಿತಾ ಮತ್ತು ಎಸ್.ವೆ ಶೇಖರ್ ಸೆನ್ಸಾರ್ ಮಂಡಳಿಗೆ ಹೊಸದಾಗಿ ನೇಮಕಗೊಂಡ ಸದಸ್ಯರು.

