ಜಾಗತಿಕ ಆಸ್ತಿಯಲ್ಲಿ ಶೇ. 1 ಶ್ರೀಮಂತರದ್ದೇ ಮೇಲುಗೈ

ವಿಶ್ವ ಆರ್ಥಿಕ ವೇದಿಕೆಯ
ವಿಶ್ವ ಆರ್ಥಿಕ ವೇದಿಕೆಯ

ಪ್ಯಾರಿಸ್: ಇದು ಜಾಗತಿಕ ಅಸಮಾನತೆಯ ಅಸಲಿ ಮುಖ. 2016ರ ವೇಳೆಗೆ ವಿಶ್ವದ ಶೇ. 1ರಷ್ಟು ಸಿರಿವಂತರ ಬಳಿ ಸಂಗ್ರಹವಾಗುವ ಆಸ್ತಿಯು ಉಳಿದ ಶೇ. 99 ಮಂದಿಯ ಆಸ್ತಿಯನ್ನೂ ಮೀರಲಿದೆ ಎಂದು ಪ್ಯಾರಿಸ್‌ನ ದತ್ತಿ ಸಂಸ್ಥೆಯೊಂದು ಹೇಳಿದೆ.

ಸ್ವಿಜರ್ಲೆಂಡ್‌ನ ದಾವೋಸ್‌ನಲ್ಲಿ ವಿಶ್ವದ ಅತಿ ಪ್ರಭಾವಶಾಲಿಗಳ ಸಮ್ಮೇಳನ ನಡೆಯಲಿರುವ ಹಿನ್ನೆಲೆಯಲ್ಲಿ ದತ್ತಿ ಸಂಸ್ಥೆ ಆಕ್ಸ್‌ಫಾಮ್ ಈ ವರದಿಯನ್ನು ಹೊರಹಾಕಿದೆ. ಜಾಗತಿಕ ಅಸಮಾನತೆಯ ಮಟ್ಟವು ಅಚ್ಚರಿ ಹುಟ್ಟಿಸಿದ್ದು, ಶ್ರೀಮಂತರು ಮತ್ತು ಉಳಿದವರ ನಡುವಿನ ಅಂತರವು ಬಹಳ ವೇಗವಾಗಿ ಹೆಚ್ಚುತ್ತಿದೆ ಎಂದು ಆಕ್ಸ್‌ಫಾಮ್ ಕಾರ್ಯಕಾರಿ ನಿರ್ದೇಶಕ ವಿನ್ನಿ ಬ್ಯಾನಿಮಾ ಹೇಳಿದ್ದಾರೆ. ಶ್ರೀಮಂತ ಶೇ. 1ರಷ್ಟು ಜನರ ಜಾಗತಿಕ ಆಸ್ತಿಯು 2009ರಲ್ಲಿ ಶೇ. 44ರಷ್ಟಿತ್ತು. 2014ರ ವೇಳೆಗೆ ಇದು ಶೇ. 48ಕ್ಕೇರಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com