ಸುನಂದಾ ಸಾವು: ಮತ್ತೆ ತರೂರ್ ವಿಚಾರಣೆ ಸಾಧ್ಯತೆ

ಸುನಂದಾ ಪುಷ್ಕರ್ ಸಾವು ಪ್ರಕರಣಕ್ಕೆ ಸಂಬಂಧಿಸಿ ಪತಿ, ಸಂಸದ ಶಶಿ ತರೂರ್ ಅವರನ್ನು ದೆಹಲಿ...
ಸುನಂದಾ ಪುಷ್ಕರ್ ಮತ್ತು ಶಶಿ ತರೂರ್
ಸುನಂದಾ ಪುಷ್ಕರ್ ಮತ್ತು ಶಶಿ ತರೂರ್

ನವದೆಹಲಿ: ಸುನಂದಾ ಪುಷ್ಕರ್ ಸಾವು ಪ್ರಕರಣಕ್ಕೆ ಸಂಬಂಧಿಸಿ ಪತಿ, ಸಂಸದ ಶಶಿ ತರೂರ್ ಅವರನ್ನು ದೆಹಲಿ ಪೊಲೀಸರ ವಿಶೇಷ ತನಿಖಾ ತಂಡ(ಎಶ್‌ಐಟಿ)ದ ಅಧಿಕಾರಿಗಳು ಮತ್ತೆ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಸುನಂದಾ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ತರೂರ್ ಅವರನ್ನು ನಿನ್ನೆ ರಾತ್ರಿ ವಿಚಾರಣೆಗೆ ಒಳಪಡಿಸಿತ್ತು. ವಿಚಾರಣೆ ವೇಳೆ ತರೂರ್ ನೀಡಿದ ಹೇಳಿಕೆಗಳನ್ನು ಪರಿಶೀಲಿಸುತ್ತಿದ್ದು, ಅಗತ್ಯಬಿದ್ದರೆ ಮತ್ತೆ ಅವರನ್ನು ವಿಚಾರಣೆಗೊಳಪಡಿಸಲಾಗುವುದು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ನೀಡಿದ್ದ ನೋಟಿಸ್ ನಂತರ ನಿನ್ನೆ ರಾತ್ರಿ 7.30ರ ವೇಳೆಗೆ ದೆಹಲಿಯ ವಸಂತ್ ವಿಹಾರ್ ಠಾಮೆಗೆ ತೆರಳಿದ ತರೂರ್ ಅವರು ವಿಚಾರಣೆಗೊಳಪಟ್ಟರು. ತರೂರ್ ಅವರನ್ನು ಸಾಕ್ಷಿಯಾಗಿ ವಿಚಾರಣೆ ನಡೆಸಲಾಗಿದೆ. ಇದಕ್ಕೂ ಮೊದಲು ತರೂರ್ ಅವರು ಕಾನೂನು ತಜ್ಞರ ಅಭಿಪ್ರಾಯ ಪಡೆದರು ಎನ್ನಲಾಗಿದೆ.

ದೆಹಲಿ ಪೊಲೀಸ್ ಆಯುಕ್ತ ಬಿಎಸ್ ಬಸ್ಸಿ ಅವರು ಮತಾನಾಡಿ, ಕಳೆದ ರಾತ್ರಿ ತರೂರ್ ಅವರನ್ನು ವಿಚಾರಣೆ ನಡೆಸಿದ್ದೇವೆ. 2014 ಜನವರಿ 17ರ ಹಿಂದಿನ ದಿನಗಳಲ್ಲಿ ಏನಾಯಿತು, ಮತ್ತು ಘಟನೆ ನಡೆಯುವ ಮುನ್ನಾ ದಿನಗಳಲ್ಲಿ ಇದ್ದ ಪರಿಸ್ಥಿತಿ ಸೇರಿದಂತೆ ಇತರೆ ಮಾಹಿತಿಗಳನ್ನು ಪಡೆದಿದ್ದೇವೆ. ಸದ್ಯಕ್ಕೆ ಅವರ ಹೇಳಿಕೆಗಳನ್ನು ಪರಿಶೀಲಿಸಲಾಗುತ್ತಿದೆ, ನಂತರ ಅಗತ್ಯ ಬಿದ್ದರೆ ಮತ್ತೆ ಅವರನ್ನು ವಿಚಾರಣೆ ಒಳಪಡಿಸುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ವಿಚಾರಣೆಗೆ ತರೂರ್ ಅವರು ಉತ್ತಮವಾಗಿ ಸ್ಪಂಧಿಸಿದ್ದಾರೆ ಎಂದ ಅವರು, ಮತ್ತೆ ಕೆಲವರನ್ನು ವಿಚಾರಣೆಗೆ ಒಳಪಡಿಸಲಾಗುವುದು ಎಂದು ತಿಳಿಸಿದ್ದಾರೆ.

ವಿಚಾರಣೆ ಹಿನ್ನೆಲೆಯಲ್ಲಿ ಠಾಣೆಯ ಸುತ್ತಮುತ್ತ ಬಿಗಿ ಭದ್ರತೆ ಕಲ್ಪಿಸಲಾಗಿತ್ತು. ದೆಹಲಿ ಪೊಲೀಸ್ ಇಲಾಖೆಯ ಎರಡು ಡಿಸಿಪಿಗಳು, ಎರಡು ಇನ್ಸ್‌ಪೆಕ್ಟರ್‌ಗಳು ಸೇರಿ ಒಟ್ಟು ಐದು ಮಂದಿ ವಿಚಾರಣೆಯಲ್ಲಿ ಪಾಲ್ಗೊಂಡಿದ್ದರು ಎಂದು ತಿಳಿದು ಬಂದಿದೆ.

ಈ ವೇಳೆ ಸುನಂದಾ ಸಾವಿಗೆ ಸಂಬಂಧಿಸಿ ಅವರು ತರೂರ್‌ಗೆ 50 ಪ್ರಶ್ನೆಗಳನ್ನು ಕೇಳಿದ್ದಾರೆ. ಮೂಲಗಳ ಪ್ರಕಾರ ತರೂರ್ ಅವರನ್ನು ಮೂರು ಬಾರಿ ವಿಚಾರಣೆಗೊಳಿಸಲು ಪೊಲೀಸರು ನಿರ್ಧರಿಸಿದ್ದಾರೆ.

ಕಳೆದ ವರ್ಷ ದೆಹಲಿಯ ಪಂಚತಾರಾ ಹೋಟೆಲೊಂದರಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದ ಸುನಂದಾ ಪುಷ್ಕರ್ ಸಾವಿಗೆ ಸಂಬಂಧಿಸಿ ದೆಹಲಿ ಪೊಲೀಸರು ಇತ್ತೀಚೆಗಷ್ಟೆ ಹತ್ಯೆ ಪ್ರಕರಣ ದಾಖಲಿಸಿದ್ದರು. ಈ ಸಂಬಧ ತರೂರ್ ಅವರನ್ನು ಮರು ವಿಚಾರಣೆ ನಡೆಸುವ ಸುಳಿವು ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com