ದೆಹಲಿ ಚುನಾವಣೆ: ಕಿರಣ್ ಬೇಡಿ, ಕೇಜ್ರಿವಾಲ್‌ರಿಂದ ನಾಮಪತ್ರ ಸಲ್ಲಿಕೆ

ದೆಹಲಿ ವಿಧಾನಸಭಾ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಕಿರಣ್ ಬೇಡಿ ಅವರು ಬುಧವಾರ ಭರ್ಜರಿ ರೋಡ್ ಶೋ ಮೂಲಕ ತೆರಳಿ ನಾಮಪತ್ರ...
ಕಿರಣ್ ಬೇಡಿ ರೋಡ್ ಶೋ
ಕಿರಣ್ ಬೇಡಿ ರೋಡ್ ಶೋ

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಕಿರಣ್ ಬೇಡಿ ಅವರು ಬುಧವಾರ ಭರ್ಜರಿ ರೋಡ್ ಶೋ ಮೂಲಕ ತೆರಳಿ ನಾಮಪತ್ರ ಸಲ್ಲಿಸಿದರು. ಕಿರಣ್ ಬೇಡಿ ಅವರಿಗೆ ಕೇಂದ್ರ ಸಚಿವ ಡಾ. ಹರ್ಷವರ್ಧನ್ ಅವರು ಸಾಥ್ ನೀಡಿದರು.

ದೆಹಲಿಯ ಕೃಷ್ಣನಗರದಿಂದ ಕಣಕ್ಕಿಳಿದಿರುವ ಕಿರಣ್ ಬೇಡಿ ಅವರು ತೆರೆದ ವಾಹನದಲ್ಲಿ ರೋಡ್ ಶೋ ಮೂಲಕ ತೆರಳಿ ಇಂದು ತಮ್ಮ ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಕೆ ಇಂದು ಕಡೆಯ ದಿನವಾಗಿದ್ದರಿಂದ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಹಾಗೂ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಅಜಯ್ ಮಾಕೇನ್ ಸಹ ಇಂದೇ ತಮ್ಮ ನಾಮಪತ್ರ ಸಲ್ಲಿಸಿದರು.ಇನ್ನು ನಾಮಪತ್ರ ಹಿಂಪಡೆಯಲು ಜನವರಿ 24 ಕಡೆಯ ದಿನವಾಗಿದೆ.

ಕೇಜ್ರಿವಾಲ್ ಅವರು ನಿನ್ನೆಯೇ ನಾಮಪತ್ರ ಸಲ್ಲಿಸಬೇಕಾಗಿತ್ತು. ಆದರೆ ಕೇಜ್ರಿವಾಲ್ ಅವರು ಸುಮಾರು 7 ಕಿ.ಮೀ. ವರೆಗೆ ರೋಡ್ ಶೋ ನಡೆಸುವ ಮೂಲಕ ತಮ್ಮ ಶಕ್ತಿ ಪ್ರದರ್ಶನ ಮಾಡಿದ್ದರು. ಟ್ರಾಫಿಕ್ ಜಾಮ್‌ನಿಂದಾಗಿ ರ್ಯಾಲಿ ವಿಳಂಬವಾದ ಹಿನ್ನೆಲೆಯಲ್ಲಿ ಅವರು ತಮ್ಮ ಉದ್ದೇಶಿತ ನಾಮಪತ್ರ ಸಲ್ಲಿಕೆ ಕಾರ್ಯವನ್ನು ದಿನದ ಮಟ್ಟಿಗೆ ಮುಂದೂಡಿದ್ದರು. ಹೀಗಾಗಿ ಅವರು ಇಂದು ನವದೆಹಲಿ ವಿಧಾನಸಭಾ ಕ್ಷೇತ್ರದಿಂದ ಇಂದು ನಾಮಪತ್ರ ಸಲ್ಲಿಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com