ಒಬಾಮಗೆ ಖಾಸಗಿ ಔತಣಕೂಟ

ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ಭಾರತ ಭೇಟಿಗೆ ಎಲ್ಲ ಸಿದ್ದತೆಗಳು ನಡೆದಿದ್ದು, ಅವರು ಭಾರತದಲ್ಲಿ ಏನೇನು ಮಾಡಲಿದ್ದಾರೆ...
ನರೇಂದ್ರ ಮೋದಿ ಜತೆ ಬರಾಕ್ ಒಬಾಮ
ನರೇಂದ್ರ ಮೋದಿ ಜತೆ ಬರಾಕ್ ಒಬಾಮ
Updated on

ನವದೆಹಲಿ: ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ಭಾರತ ಭೇಟಿಗೆ ಎಲ್ಲ ಸಿದ್ದತೆಗಳು ನಡೆದಿದ್ದು, ಅವರು ಭಾರತದಲ್ಲಿ ಏನೇನು ಮಾಡಲಿದ್ದಾರೆ ಎಂಬ ಬಗ್ಗೆ ಪಟ್ಟಿಯೂ ಸಿದ್ಧ
ವಾಗುತ್ತಿದೆ. ವಿಶೇಷವೆಂದರೆ,ಮೊತ್ತಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು 7 ರೇಸ್‍ಕೋರ್ಸ್ ರಸ್ತೆಯ ಲ್ಲಿರುವ ತಮ್ಮ ಅ„ಕೃತ ನಿವಾಸದಲ್ಲಿ ಒಬಾಮಅವರಿಗೆ ಔತಣಕೂಟ ಏರ್ಪಡಿಸಿದ್ದಾರೆ. ಇದು ವಿಶೇಷ ಏಕೆಂದರೆ, ಈವರೆಗೆ ಪ್ರಧಾನಿ ಮೋದಿ ಅವರು ವಿದೇಶದ ಯಾವುದೇ ಗಣ್ಯರಿಗೆ ತಮ್ಮ ಅಧಿಕೃತನಿವಾಸದಲ್ಲಿ ಔತಣಕೂಟ ಏರ್ಪಡಿಸಿರಲಿಲ್ಲ.

ಆಸ್ಟ್ರೇಲಿಯಾ  ಪ್ರಧಾನಿ ಟೋನಿ ಅಬೋಟ್ ಭಾರತಕ್ಕೆ ಬಂದಿದ್ದಾಗ ಹೈದರಾಬಾದ್ ಹೌಸ್‍ನಲ್ಲಿ, ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಅವರಿಗೆ ಸಬರಮತಿ ತೀರದಲ್ಲಿ ಔತಣ ಕೂಟ ಏರ್ಪಡಿಸಲಾಗಿತ್ತು. ಆದರೆ ಒಬಾಮ ಅವರಿಗೆ ಮಾತ್ರ  7ಆರ್‍ಸಿಆರ್‍ನ ಪಂಚವಟಿ ಸಂಕೀರ್ಣದಲ್ಲಿ ಖಾಸಗಿ ಔತಣಕೂಟ ಆಯೋಜಿಸಲಾಗಿದೆ. ಇದರಲ್ಲಿ ಮೋದಿ ಸಂಪುಟದ ಕೆಲವೇ ಕೆಲವು ಸದಸ್ಯರಷ್ಟೇ ಪಾಲ್ಗೊಳ್ಳಲಿದ್ದಾರೆ.

ಒಬಾಮಗೆ ಖೀಮಾ , ದಾಲ್: ಒಬಾಮ ಕುಟುಂಬಕ್ಕೆ ಯಾವ ರೀತಿಯ ಆಹಾರ ಇಷ್ಟ ಎಂಬುದನ್ನು ಮೊದಲೇ ತಿಳಿದುಕೊಳ್ಳುವಂತೆಯೂ ಮೋದಿ ಅವರು ತಮ್ಮ ಆಪ್ತ
ಸಹಚರರಿಗೆ ತಿಳಿಸಿದ್ದಾರೆ. ಒಬಾಮ ಅವರು ಈಗಾಗಲೇ ತಮ್ಮ ಖೀಮಾ  ಮತ್ತು ದಾಲ್ ಮೇಲಿನ ಪ್ರೀತಿಯನ್ನು ತಿಳಿಸಿದ್ದಾರೆ.
ಔತಣಕೂಟ ಜ.25ರಂದು ನಡೆಯುವ ಸಾಧ್ಯತೆಯಿದ್ದು, ದಿನಾಂಕ ನಿಗದಿಯಾಗಿಲ್ಲ.
ಭೇಟಿ ಅವಧಿಯಲ್ಲಿ ಒಬಾಮ ಪ್ರೇಮ ಸೌಧ ತಾಜ್‍ಮಹಲ್‍ಗೆ ಭೇಟಿನೀಡಲಿದ್ದು, ಜ.27ರಂದು ಸಿರಿಪೋರ್ಟ್  ಸಭಾಂಗಣದಲ್ಲಿ `ಇಂಡಿಯಾ  ಆ್ಯಂಡ್ ಅಮೆರಿಕ: ದಿ ಫ್ಯೂಚರ್
ವಿ ಕ್ಯಾನ್ ಬಿಲ್ಡ್ ಟುಗೆದರ್' ಎಂಬ ಬಗ್ಗೆ ಸಾರ್ವಜನಿಕ ಭಾಷಣ ಮಾಡಲಿದ್ದಾರೆ.

108 ನಿಮಿಷಗಳ ಔಟಿಂಗ್: ಗಣರಾಜ್ಯೋತ್ಸವ ಪರೇಡ್ ವೇಳೆ ಒಬಾಮ ಅವರು ಒಂದು ಗಂಟೆ 48 ನಿಮಿಷಗಳ ಕಾಲ ರಾಜ್‍ಪಥ್‍ನಲ್ಲಿ ಇರಲಿದ್ದಾರೆ. ಅವರ ಪ್ರತಿ ನಿಮಿಷದ ಕಾರ್ಯಕ್ರಮವನ್ನೂ ನಿಗದಿ ಮಾಡಲಾಗಿದ್ದು, ಸಚಿವರೆಲ್ಲರಿಗೂ ಕಳುಹಿಸಲಾಗಿದೆ. ರಾಷ್ಟ್ರಪತಿ
ಪ್ರಣಬ್ ಅವರೊಂದಿಗೆ ಬೆಳಗ್ಗೆ 9.57ಕ್ಕೆ ರಾಜ್‍ಪಥ್‍ಗೆ ಆಗಮಿಸಲಿರುವ ಒಬಾಮಪರೇಡ್ ಮುಗಿಯುವವರೆಗೆ ಅಂದರೆ ೧೧. ೪೫ ರ ವರೆಗೆ ಅಲ್ಲಿರಲಿದ್ದಾರೆ.

ನಮಗೆ ಅಮೆರಿಕ ಎಚ್ಚರಿಕೆ ಕೊಟ್ಟಿಲ್ಲ ಎಂದ ಪಾಕ್
ಒಬಾಮ ಭೇಟಿ ವೇಳೆ ಭಾರತದಲ್ಲಿ ಯಾವುದೇ ಉಗ್ರ ಕೃತ್ಯನಡೆಯಬಾರದು ಎಂದು ಪಾಕಿಸ್ತಾನಕ್ಕೆ ಅಮೆರಿಕ ಎಚ್ಚರಿಕೆ ನೀಡಿದೆ ಎಂಬ ವರದಿಯನ್ನು ಪಾಕ್ ಸರ್ಕಾರ ತಳ್ಳಿಹಾಕಿದೆ.ಅಂತಹ ಯಾವುದೇ ಎಚ್ಚರಿಕೆ ಬಂದಿಲ್ಲ. ಭಾರತವು ಸುಖಾಸುಮ್ಮನೆ ಎಲ್ಲವನ್ನೂ ವೈಭವೀಕರಿಸಿ ಮಾತನಾಡುತ್ತದೆಎಂದು ಅಮೆರಿಕದಲ್ಲಿನ ಪಾಕಿಸ್ತಾನ ರಾಯಭಾರಿ ಜಲೀಲ್
ಅಬ್ಬಾಸ್ ಜಿಲಾನಿ ಹೇಳಿದ್ದಾರೆ. ಈ ಮೂಲಕ ತಮಗಾದಮುಜುಗರವನ್ನು ಮುಚ್ಚಿಕೊಳ್ಳಲು ಪ್ರಯತ್ನಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com