ಪರಮಾಣು ಒಪ್ಪಂದಕ್ಕೆ ಅಮೆರಿಕ ಒಪ್ಪಿಗೆ?

ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಭಾರತ ಮತ್ತು ಅಮೆರಿಕ ನಾಗರಿಕ ಪರಮಾಣು ಒಪ್ಪಂದಕ್ಕೆ ಬರಾಕ್ ಒಬಾಮ ...
ಮೋದಿ ಜೊತೆ ಬರಾಕ್ ಒಬಾಮ
ಮೋದಿ ಜೊತೆ ಬರಾಕ್ ಒಬಾಮ
Updated on

ನವದೆಹಲಿ: ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಭಾರತ ಮತ್ತು ಅಮೆರಿಕ ನಾಗರಿಕ ಪರಮಾಣು ಒಪ್ಪಂದಕ್ಕೆ ಬರಾಕ್ ಒಬಾಮ ಅವರ ಭೇಟಿಗೂ ಮುನ್ನ ಒಪ್ಪಿಗೆ
ಸಿಗುವುದು ಬಹುತೇಕ ಖಚಿತವಾಗಿದೆ. ಒಪ್ಪಂದಕ್ಕೆ ಸಂಬಂಧಿಸಿ ಭಿನ್ನಾಭಿಪ್ರಾಯ ಬಗೆಹರಿಸಲು ಈಗಾಗಲೇ ಎರಡು ಸುತ್ತಿನ ಮಾತುಕತೆ ಪೂರ್ಣಗೊಳಿಸಲಾಗಿದೆ. 3ನೇ
ಹಾಗೂ ಕೊನೆ ಹಂತದ ಮಾತುಕತೆ ಸದ್ಯ ದಲ್ಲೇ ನಡೆಯಲಿದೆ. ಒಪ್ಪಂದದ ಮಹತ್ವದ ಭಾಗವಾದ `ಪರಮಾಣು ಹೊಣೆಗಾರಿಕೆ ಕಾನೂನು' ವಿಚಾರದಲ್ಲಿ ಕೆಲ ನಿಬಂಧನೆಗಳಿಗೆ
ಸಂಬಂಧಿಸಿ ಅಮೆರಿಕ ತನ್ನ ನಿಲುವು ಸಡಿಲಿಸುವ ಸೂಚನೆ ನೀಡಿದೆ. ಅಣುದುರಂತದ ವೇಳೆ ರಿಯಾಕ್ಟರ್ ಅನ್ನು ಪೂರೈಸುವ ಕಂಪನಿಯನ್ನೇ ಹೊಣೆಗಾರರನ್ನಾಗಿ ಮಾಡುವ ಬಗ್ಗೆ
ಅಮೆರಿಕಕ್ಕೆ ತೀವ್ರ ಅಸಮಾಧಾನ ಇದೆ. ಆದರೆ, ಭೋಪಾಲ್ ದುರಂತದಿಂದ ಪಾಠ ಕಲಿತಿರುವ ಭಾರತ ಈ ವಿಚಾರದಲ್ಲಿ ತನ್ನ ನಿಲುವು ಅಚಲ ಎಂದಿದೆ. ಹಾಗಾಗಿ 250 ದಶಲಕ್ಷ  ಡಾಲರ್‍ನ ವಿಮಾ  ಸುರಕ್ಷಾ  ಸೌಲಭ್ಯ ಕಲ್ಪಿಸಲು ಉಭಯ ದೇಶಗಳು ಒಪ್ಪಿಗೆ ಸೂಚಿಸಿವೆ.

ಮನ್‍ಕಿ ಬಾತ್?: ಒಬಾಮಾ  ಭಾರತ  ಭೇಟಿ ಸಂದರ್ಭದಲ್ಲಿ ಆಪ್ತ ಕ್ಷಣಗಳನ್ನು ಸೃಷ್ಟಿಸಲು ಭಾರತ  ಪ್ರಯತ್ನಿಸುತ್ತಿದೆ. ಮೂಲಗಳ ಪ್ರಕಾರ ಮೋದಿ ಹಾಗೂ ಒಬಾಮ ಜತೆಯಾಗಿ  ರಾಜ್‍ಘಾಟ್‍ನಲ್ಲಿರುವ ಮಹಾತ್ಮಾಗಾಂಧಿ  ಸಮಗ್ರ  ಸ್ಥಳಕ್ಕೆ ಭೇಟಿ ನೀಡು ತ್ತಾರೆ ಅಥವಾ ಜಂಟಿ ರೇಡಿಯೋ ಭಾಷಣ ಮಾಡಲಿದ್ದಾರೆ.

ನಿರ್ದಾಕ್ಷಿಣ್ಯ ಉಗ್ರ ದಮನ
ವಾಷಿಂಗ್ಟನ್: ಪಾಕಿಸ್ತಾನದಿಂದ ಪ್ಯಾರಿಸ್‍ನ ರಸ್ತೆಗಳವರೆಗೆ ಉಗ್ರರನ್ನು ನಿರ್ದಾಕ್ಷಿಣ್ಯವಾಗಿ ಹತ್ತಿಕ್ಕಲಾಗುವುದು ಎಂದು ಅಮೆರಿಕದ ಅಧ್ಯಕ್ಷ  ಬರಾಕ್ ಒಬಾಮ ಹೇಳಿದ್ದಾರೆ. ಇದೇ ವೇಳೆ ಅವರು ಇಸಿಸ್ ವಿರುದ್ಧ  ಹೋರಾಡಲುಇನ್ನಷ್ಟು ಅಧಿಕಾರ ನೀಡಬೇಕು ಮತ್ತು ಇರಾನ್‍ನ ವಿವಾದಾತ್ಮಕ ಅಣು ಕಾರ್ಯ ಕ್ರಮಕ್ಕೆ ಸಂಬಂಧಿಸಿ ಹೊಸ ನಿರ್ಬಂಧ ವಿಧಿಸದಂತೆ ಅಮೆರಿಕ ಸಂಸತ್ತಿಗೆ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com