
ನವದೆಹಲಿ: ಸುನಂದಾ ಪುಷ್ಕರ್ ಸಾವು ಪ್ರಕರಣ ದಿನ ಕಳೆದಂತೆ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಸುನಂದಾ ಪ್ರತಿನಿತ್ಯ ಮುಷ್ಠಿ ಇಡಿಯಷ್ಟು ಮಾತ್ರೆಗಳನ್ನು ಸೇವಿಸುತ್ತಿದ್ದರು ಎಂಬ ಮಾಹಿತಿಯನ್ನು ಸುನಂದಾರ ಆಪ್ತ ಗೆಳೆಯರೊಬ್ಬರು ಹೇಳಿದ್ದಾರೆ.
ಪ್ರಕರಣ ಕುರಿತಂತೆ ಇಂದು ಮಾಹಿತಿ ನೀಡಿರುವ ಸುನಂದಾ ಆಪ್ತ ಗೆಳೆಯ ತೇಜ್ ಶರೀಫ್ (77) ಸುನಂದಾ ಸರಿಯಾಗಿ ಊಟ ಮತ್ತು ನಿದ್ದೆ ಮಾಡುತ್ತಿರಲಿಲ್ಲ. ಸುನಂದಾ ಸಾಯುವುದಕ್ಕೂ ಎರಡು ವಾರಗಳ ಹಿಂದೆ ಗೋವಾದಲ್ಲಿದ್ದಂತಹ ಸಂದರ್ಭದಲ್ಲಿ ತುಂಬಾ ಔಷಧಗಳನ್ನು ತೆಗೆದುಕೊಳ್ಳುತ್ತಿದ್ದರು. ಯಾಕೆ ಇಷ್ಟು ಔಷಧಿ ಎಂದು ಕೇಳಿದರೆ ನನಗೆ ನಿದ್ರೆ ಸರಿಯಾಗಿ ಬರುವುದಿಲ್ಲ ಹಾಗಾಗಿ ಮಾತ್ರೆಗಳನ್ನು ಸೇವಿಸುತ್ತೇನೆ ಎಂದು ಹೇಳುತ್ತಿದ್ದರು. ಇದರ ಪರಿಣಾಮವಾಗಿಯೇ ವಾರದಲ್ಲಿ ಎರಡು ಬಾರಿಯಾದರೂ ತಲೆ ತಿರುಗಿ ಬೀಳುತ್ತಿದ್ದರು ಎಂದು ಹೇಳಿದ್ದಾರೆ.
ಮಾಜಿ ಕೇಂದ್ರ ಸಚಿವ ಶಶಿ ತರೂರ್ ಅವರ ಪತ್ನಿ ಸುನಂದಾ ಪುಷ್ಕರ್ ಅವರು ದೆಹಲಿಯ ಚಾಣಕ್ಯಪುರಿಯ ಲೀಲಾ ಪ್ಯಾಲೆಸ್ ಪಂಚತಾರಾ ಹೋಟೆಲ್‌ನ ರೂಮ್ ನಂ.345ರಲ್ಲಿ ಜನವರಿ 17ರ ರಾತ್ರಿ ನಿಗೂಢವಾಗಿ ಸಾವನ್ನಪ್ಪಿದ್ದರು.
Advertisement