
ಭೋಪಾಲ್: ಗುಜರಾತ್‌ನ ಭೋಪಾಲ್ ಶಾಸಕ ದಿಲೀಪ್ ಸಿಂಗ್ ಶೇಖಾವತ್ ಅವರ ಬಂಗಲೆಯಲ್ಲಿ ಯುವತಿ ಮೇಲೆ ಅತ್ಯಾಚಾರ ನಡೆದಿರುವ ಘಟನೆ ವರದಿಯಾಗಿದೆ.
ಶೇಖಾವತ್ ಅವರ ಬಂಗಲೆಯ ನೌಕರರ ವಸತಿ ಗೃಹದಲ್ಲಿ ವಾಸವಿದ್ದ ಎಂಬಿಎ ಪಧವೀಧರ ಸರ್ವೇಶ್ ಸಿಂಗ್(24)ಎಂಬಾತ 18 ವರ್ಷದ ಯುವತಿಯ ಮೇಲೆ ಅತ್ಯಾಚಾರ ನಡೆಸಿದ್ದು, ಆತನ ವಿರುದ್ಧ ಟಿ.ಟಿ ನಗರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಕಳೆದ ಡಿಸೆಂಬರ್ 27ರಂದು ಶಾಸಕರು ದೂರದ ಊರಿಗೆ ತೆರಳಿದ್ದ ಸಂದರ್ಭ ಒಂಟಿ ಯುವತಿಯ ಮೇಲೆ ಎರಗಿದ್ದ ಸರ್ವೇಶ್ ಆಕೆಯನ್ನು ಬೆದರಿಸಿ ಅತ್ಯಾಚಾರ ನಡೆಸಿದ್ದ.
ಎರಡು ದಿನಗಳ ಬಳಿಕ ಯುವತಿ ತಾಯಿಯ ಬಳಿ ತನಗಾದ ದೌರ್ಜನ್ಯದ ಬಗ್ಗೆ ತಿಳಿಸಿದಾಗ ಪ್ರಕರಣ ಬಯಲಾಗಿದೆ. ಅತ್ಯಾಚಾರ ಆರೋಪಿ ಸಿಎಂ ಸೆಕ್ಯೂರಿಟಿಯ ಡಿಎಸ್‌ಪಿ ಕಾರು ಚಾಲಕನ ಪುತ್ರ ಎನ್ನಲಾಗಿದ್ದು, ತಲೆ ಮರೆಸಿಕೊಂಡಿರುವ ಸರ್ವೇಶ್ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
Advertisement