ಕಲಿಕಾ ಪರವಾನಗಿ ಆನ್‌ಲೈನ್‌ನಲ್ಲಿ ಲಭ್ಯ: ರಾಮಲಿಂಗಾರೆಡ್ಡಿ

ಇನ್ನು ಮುಂದೆ ಕಲಿಕಾ ಪರವಾನಗಿ (ಎಲ್‌ಎಲ್) ಪಡೆಯಲು ವಾರಗಟ್ಟಲೆ ಕಾಯಬೇಕಿಲ್ಲ, ಪರದಾಡಬೇಕಿಲ್ಲ...
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ
Updated on

ಬೆಂಗಳೂರು: ಇನ್ನು ಮುಂದೆ ಕಲಿಕಾ ಪರವಾನಗಿ (ಎಲ್‌ಎಲ್) ಪಡೆಯಲು ವಾರಗಟ್ಟಲೆ ಕಾಯಬೇಕಿಲ್ಲ, ಪರದಾಡಬೇಕಿಲ್ಲ. ಕಾರಣ ಇನ್ನು ಮುಂದೆ ಎಲ್‌ಎಲ್‌ಅನ್ನು ಆನ್‌ಲೈನ್‌ನಲ್ಲಿ ಪಡೆಯುವ ವ್ಯವಸ್ಥೆಯನ್ನು ಸಾರಿಗೆ ಇಲಾಖೆ ಜಾರಿಗೆ ತಂದಿದೆ.

ಎಲ್‌ಎಲ್ ಪಡೆಯುವ ಮುನ್ನ ಇಲಾಖಾ ಅಧಿಕಾರಿಗಳು ಆನ್‌ಲೈನ್‌ನಲ್ಲಿ ಕೇಳುವ 15 ಪ್ರಶ್ನೆಗಳಲ್ಲಿ 10ಕ್ಕೆ ಸೂಕ್ತ ಉತ್ತರಿಸಿದರೆ ಸಾಕು ವಾರದ ಬದಲು 20-30 ನಿಮಿಷದಲ್ಲಿ ಎಲ್‌ಎಲ್ ನಿಮ್ಮ ಕೈ ಸೇರಲಿದೆ.

ಎಲೆಕ್ಟ್ರಾನಿಕ್ ಸಿಟಿಯ ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ)ಯಲ್ಲಿ ಆರಂಭವಾದ ಈ ನೂತನ ಆನ್‌ಲೈನ್ ವ್ಯವಸ್ಥೆಗೆ ಶುಕ್ರವಾರ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದರು. ನಂತರ ಮಾತನಾಡಿ, ಕಲಿಕಾ ಪರವಾನಗಿ ವಿಚರಿಸುವಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ಹಾಗೂ ಸಮಯ ಉಳಿತಾಯ ಮಾಡಲು ಈ ನೂತನ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದ ಅವರು, ಕೇಂದ್ರ ಸರ್ಕಾರ ಮೋಟಾರು ವಾಹನ ಕಾಯ್ದೆ-1988ಗೆ ತಿದ್ದುಪಡಿ ತರುವವರೆಗೂ ರಾಜ್ಯಾದ್ಯಂತ ದ್ವಿಚಕ್ರ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸುವ ಪ್ರಸ್ತಾವನೆಗೆ ಒಪ್ಪಿಗೆ ಸಿಗುವುದು ಕಷ್ಟ. ಹಾಗಾಗಿ ರಾಜ್ಯ ಸರ್ಕಾರ ಈ ಪ್ರಸ್ತಾವನೆಗೆ ಒಪ್ಪಿಗೆ ನೀಡುವ ಅಗತ್ಯವಿಲ್ಲ ಎಂದರು.

ದೇಶದಲ್ಲೇ ಪ್ರಥಮ
ಕೆಲ ರಾಜ್ಯಗಳಲ್ಲಿ ಆನ್‌ಲೈನ್ ಮುಲಕ ಎಲ್‌ಎಲ್ ಪಡೆಯುವ ವ್ಯವಸ್ಥೆ ಈಗಾಗಲೇ ಜಾರಿಯಲ್ಲಿದೆ. ಆದರೆ ಆಡಿಯೋ ಸಹಿತ ವ್ಯವಸ್ಥೆ ದೇಶದಲ್ಲೇ ಇದೇ ಮೊದಲು. ಕನ್ನಡ ಹಾಗೂ ಆಂಗ್ಲ ಎರಡೂ ಭಾಷೆಯಲ್ಲಿ ಸಾಫ್ಟ್‌ವೇರ್ ಇರಲಿದ್ದು ಪ್ರಶ್ನೆಗಳನ್ನು ಪರದೆ ಮೇಲೆ ತೋರಿಸುವ ಜತೆಗೆ ಓದುವ ಸಾಫ್ಟೆವೇರ್ ಕೂಡ ಇರಲಿದೆ ಎಂದು ಸಾರಿಗೆ ಆಯುಕ್ತ ರಾಮೇಗೌಡ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com