ಜೈಪುರ ಸಾಹಿತ್ಯೋತ್ಸವದಲ್ಲಿ ರಾಷ್ಟ್ರಗೀತೆಗೆ ಅಗೌರವ?

ಜೈಪುರ ಸಾಹಿತ್ಯ ಉತ್ಸವ
ಜೈಪುರ ಸಾಹಿತ್ಯ ಉತ್ಸವ

ಜೈಪುರ: ಜೈಪುರ ಸಾಹಿತ್ಯ ಉತ್ಸವದಲ್ಲಿ ರಾಷ್ಟ್ರಗೀತೆಗೆ ಅವಮಾನ ಮಾಡಲಾಗಿದೆ ಎಂದು ಆರೋಪ ಕೇಳಿ ಬಂದಿದೆ.

ಉತ್ಸವದ ಉದ್ಘಾಟನಾ ಸಮಾರಂಭದಲ್ಲಿ ಸಂಘಟಕರು ರಾಷ್ಟ್ರಗೀತೆಯನ್ನು ಹಾಡುವ ನಿಯಮವನ್ನು ಬದಲಿಸಿದ್ದಾರೆ ಎಂದು ದೂರಲಾಗಿದೆ. ಈ ವಿಚಾರ ಈಗ ನ್ಯಾಯಾಲಯದ ಕಟೆಕಟೆ ಏರಿದ್ದು, ಈ ಸಂಬಂಧ ಸಂಘಟಕರ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ.

ಪತ್ರಿಕೆಯೊಂದರಲ್ಲಿ ಪ್ರಕಟವಾದ ವರದಿಯನ್ನು ಆಧರಿಸಿ ಜೈಪುರ ನಿವಾಸಿ ಮಧುಸೂದನ್ ರಾಥೋಡ್ ಅವರು ಉತ್ಸವದ ಸಂಘಟಕರಾದ ಸಂಜಯ್ ರಾಯ್ ಮತ್ತಿತರರ ವಿರುದ್ಧ ಗುರುವಾರ ದೂರು ದಾಖಲಿಸಿದ್ದರು.

ರಾಷ್ಟ್ರಗೀತೆಯನ್ನು 52 ಸೆಕುಂಡುಗಲ್ಲಿ ಹಾಡಿ ಮುಗಿಸಬೇಕು. ಆದರೆ, ಸಾಹಿತ್ಯೋತ್ಸವದಲ್ಲಿ ಸಂಘಟಕರ ನಿರ್ಲಕ್ಷ್ಯದಿಂದಾಗಿ ಈ ನಿಯಮ ಉಲ್ಲಂಘಿಸಲಾಗಿದೆ. ಸಂಘಟಕರು ಉದ್ದೇಶಪೂರ್ವಕವಾಗಿ ಈ ರೀತಿ ಮಾಡಿಲ್ಲವಾಗಿದ್ದರೂ ರಾಷ್ಟ್ರಗೀತೆಗೆ ಅಗೌರವ ತೋರುವುದು ಯಾವತ್ತಿದ್ದರೂ ತಪ್ಪೆ. ಹಾಗಾಗಿ ಕಾರ್ಯಕ್ರಮದ ಆಯೋಜಕರು ಎಂದು ದೂರಿನಲ್ಲಿ ಆಗ್ರಹಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com